ಕಲಬುರ್ಗಿ : ರಾಜ್ಯದಲ್ಲಿ ಮತ್ತೆ ಮತಾಂತರ ಪ್ರಕರಣ ಬೆಳಕಿಗೆ ಬಂದಿದ್ದು, ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕ್ವಾಟರ್ಸ್‌ನಲ್ಲಿ ಹಣದ ಆಮಿಷ ತೋರಿಸಿ, ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಫೆಬ್ರವರಿ 22ರ ರಾತ್ರಿ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕ್ವಾಟರ್ಸ್‌ನಲ್ಲಿದ್ದ ನರ್ಸ್‌ಗಳಿಗೆ ಪ್ರಶ್ನೆ ಮಾಡಿದ್ದರು. ಹೀಗಾಗಿ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕ್ವಾಟರ್ಸ್‌ನಲ್ಲಿ ನರ್ಸ್ಗಳಾದ ಅಶ್ವಿನಿ ಹಾಗೂ ರುಬಿಕಾ ಗುರುವಾರ (ಫೆ.22)ರ ರಾತ್ರಿ ಆಸ್ಪತ್ರೆಯ ಕ್ವಾಟರ್ಸ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಭೋಧಿಸುತ್ತಿದ್ದರು. ಹಣದ ಆಮಿಷ ತೋರಿಸಿ, ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಫೆಬ್ರವರಿ 22ರ ರಾತ್ರಿ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕ್ವಾಟರ್ಸ್‌ನಲ್ಲಿದ್ದ ನರ್ಸ್‌ಗಳಿಗೆ ಪ್ರಶ್ನೆ ಮಾಡಿದ್ದರು.ಇದೀಗ ನರ್ಸ್ ಅಶ್ವಿನಿ ನೀಡಿದ ದೂರಿನನ್ವಯ ಹಿಂದೂ ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
BREAKING: ಬಿಲ್ಕಿಸ್ ಬಾನೋ ಪ್ರಕರಣ:ಸೋದರಳಿಯನ ಮದುವೆಗೆ ಹಾಜರಾಗಲು ಆರೋಪಿಗೆ 10 ದಿನ ‘ಪೆರೋಲ್’
ಮತಾಂತರ ನಿಷೇಧ ಕಾಯ್ದೆ ಏನು ಹೇಳುತ್ತೆ?
ಬಲವಂತದ, ವಂಚನೆ, ಒತ್ತಾಯ ಹಾಗೂ ಆಮಿಷದ ಮದುವೆಗೆ ಕಾಯ್ದೆ ಮೂಲಕ ನಿಷೇಧ. ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ಜೈಲು ಮತ್ತು 25 ಸಾವಿರ ದಂಡ ಹಾಕಲು ಅವಕಾಶವಿದೆ. ಅಪ್ರಾಪ್ತರು ಹಾಗೂ ದಲಿತರ ಮತಾಂತರಕ್ಕೆ 3 ರಿಂದ 10 ವರ್ಷ ಶಿಕ್ಷೆ ಮತ್ತು 50 ಸಾವಿರ ದಂಡ ಹಾಕಲು ಅವಕಾಶವಿದೆ.
ಈ 4 ರಾಶಿಯವರಿಗೂ ಕೂಡ ಲಾಟರಿ ಹೊಡೆಯುತ್ತದೆ ಅಷ್ಟಲಕ್ಷ್ಮೀ ದೇವಿಯ ಪುತ್ರರಾಗುತ್ತಾರೆ..
ಬಲವಂತದ ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ 5 ಲಕ್ಷ ಪರಿಹಾರ ಕೊಡಲಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ಮತಾಂತರದ ಉದ್ದೇಶದಿಂದ ನಡೆದ ವಿವಾಹ ಅನೂರ್ಜಿತವಾಗಲಿದೆ. ಅಪರಾಧ ಪುನರಾವರ್ತನೆಯಾದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ.ಮತಾಂತರಕ್ಕೂ ಅವಕಾಶವಿದೆ. ಆದರೆ 30 ದಿನ ಮೊದಲೇ ಜಿಲ್ಲಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು. ಬಲವಂತದ ಮತಾಂತರ ಅಪರಾಧ ಜಾಮೀನು ರಹಿತವಾಗಿರಲಿದೆ. ಯಾವುದೇ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ 20 ದಿನದೊಳಗಾಗಿ ಜಿಲ್ಲಾಧಿಕಾರಿ ಮುಂದೆ ಹಾಜರಾಗಬೇಕು.
BREAKING:ಮುಂಬೈ-ಮಾರಿಷಸ್ ವಿಮಾನದಲ್ಲಿ ಅಸಮರ್ಪಕ ಎಸಿ:ಉಸಿರಾಟದ ಸಮಸ್ಯೆಯಿಂದ ಬಳಲಿದ ಪ್ರಯಾಣಿಕರು