ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಐವರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿದೆ.
BREAKING NEWS : ಟಾಲಿವುಡ್ ಹಿರಿಯ ನಟ `ಚಲಪತಿ ರಾವ್’ ಇನ್ನಿಲ್ಲ| Chalapathi Rao no more
40 ಪರ್ಸೆಂಟ್ ಕಮಿಷನ್ ಆಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿದ್ದರು.
ಸಚಿವ ಮುನಿರತ್ನ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು, ಡಿ.ಕೆಂಪಣ್ಣ ಜೊತೆಗೆ ವಿ.ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪ ಅವರನ್ನೂ ಅರೆಸ್ಟ್ ಮಾಡಿ ಕೋರಮಂಗಲದಲ್ಲಿರುವ ಜಡ್ಜ್ ನಿವಾಸದಲ್ಲಿ ಜಡ್ಜ್ ಎದುರು ಹಾಜರುಪಡಿಸಿದ್ದರು. ಗಂಭೀರ ಅಪರಾಧ ಪ್ರಕರಣ ಅಲ್ಲದಿದ್ದರಿಂದ ನ್ಯಾಯಾಧೀಶರು ಬಂಧಿತ ಐವರಿಗೂ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ ಸೋಮವಾರ ಕೋರ್ಟ್ಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.