ವಿಜಯಪುರ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಶೇ.50ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ. ನಮ್ಮ ವಿರುದ್ಧ ಆರೋಪ ಮಾಡಿದ ಸರ್ಕಾರದಲ್ಲೇ ಅದಕ್ಕಿಂತ ಹೆಚ್ಚು ದಂಧೆ ನಡೆಯುತ್ತಿದೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅರು ಶೇ.13ರಷ್ಟು ಕಮೀಷನ್ ಇಲ್ಲದೇ ಗುತ್ತಿಗೆದಾರರಿಗೆ ಎನ್ಒಸಿಯನ್ನೇ ಈ ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಎಲ್ಲವೂ ಸೇರಿದರೇ ಶೇ.50ರಷ್ಟು ಕಮೀಷನ್ ಗೆ ಬಂದಿದೆ ಎಂಬುದಾಗಿ ಆರೋಪಿಸಿದರು.
ನಮ್ಮ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡುತ್ತಿದ್ದರು. ಆದರೇ ಇವರು 50 ಪರ್ಸೆಂಟ್ ಕಮೀಷನ್ ಪಡೆಯುತ್ತಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಬಿಬಿಎಂಪಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇಂದು ಬಂದಿದೆ. ನಮ್ಮ ಸರ್ಕಾರವೇ ಉತ್ತಮ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ವಿಜಯೇಂದ್ರ ಉತ್ತಮವಾಗಿದ್ದರು ಎಂದು ಗುತ್ತಿಗೆದಾರರು ತಿಳಿಸುತ್ತಿದ್ದಾರೆ ಎಂದರು.
‘ಕ್ಷಮಿಸಿ, ಮೋದಿ ಸರ್ಕಾರಕ್ಕೆ ಕ್ಷಮೆಯಾಚಿಸಿದ ಗೂಗಲ್! ಕಾರಣ ಏನು ಗೊತ್ತಾ?
2032 ರ ವೇಳೆಗೆ ರಾಜ್ಯದಲ್ಲಿ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ ಬೆಳೆಸುವ ಗುರಿ: ಸಚಿವ ಎಂ.ಬಿ ಪಾಟೀಲ್!