ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಎನ್ನುವವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಆರೋಪಿಸಿ ಗುತ್ತಿಗೆದಾರ ಸಚಿನ್ ಎಂಬಾತ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದನು. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಯುವಕ ಸಚಿನ್ ಪಾಂಚಾಳರ ಸಾವು ದುರದೃಷ್ಟಕರವಾದುದು, ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳ ಹೇಳಿಕೆಗಳು ಒಂದು ಬಗೆಯಲ್ಲಿವೆ, ಸಚಿನ್ ಬರೆದಿದ್ದೆನ್ನಲಾಗಿರುವ ಡೆತ್ ನೋಟ್ ನಲ್ಲಿ ಇನ್ನೊಂದು ಬಗೆಯ ವಿಷಯಗಳು ಕಂಡು ಬರುತ್ತವೆ. ಈಗಾಗಲೇ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂದಿದ್ದಾರೆ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರುವಲ್ಲಿ ತನಿಖಾ ಸಂಸ್ಥೆಗಳು ಪರಿಣಾಮಕಾರಿಯಾಗಿ ತನಿಖೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಮಿಥ್ಯಾರೋಪ ಮಾಡುವುದು ಬಿಜೆಪಿಯವರ ಹಳೆಯ ಅಭ್ಯಾಸ, ಈ ಹಿಂದೆಯೂ ನನ್ನ ಮೇಲೆ ನಿರಾಧರ ಆರೋಪ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಿರುತ್ತಾರೆ. ಬಿಜೆಪಿಯವರು ಅ ಪ್ರಯತ್ನ ಮುಂದುವರೆಸುತ್ತಲೇ ಇರಲಿ. ಆದರೆ ಆಧಾರ ರಹಿತ ಆರೋಪಗಳಿಂದ ನನ್ನನ್ನು ಕುಗ್ಗಿಸುವ ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಬಾಲಭವನದ ಬಿಜೆಪಿ ಅಧ್ಯಕ್ಷರನ್ನು ನೋಡಿ ಜಗನ್ನಾಥ ಭವನದ ನಾಯಕರು ಬೀದಿಯಲ್ಲಿ ನಗುತ್ತಿದ್ದಾರೆ: ರಮೇಶ್ ಬಾಬು ವ್ಯಂಗ್ಯ
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಕೇಸ್: ವೈದ್ಯರಿಂದ ಈ ಸ್ಪಷ್ಟನೆ