ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಬಿ ರಿಪೋರ್ಟ್ ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ʻನಾನು ಏನು ತಪ್ಪು ಮಾಡಿಲ್ಲ, ಕೋರ್ಟ್ಗೆ ಹೋಗಿ ಸಾಬೀತು ಪಡಿಸಲಿ ʼ ಎಂದು ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಕೋರ್ಟ್ಗೆ ಹೋಗಿ ತಪ್ಪು ಮಾಡಿದ್ದೇನೆ ಎಂದು ಸಾಬೀತು ಪಡಿಸಲಿ. ಸಾಬೀತು ಪಡಿಸಿದರೆ ಡಿ.ಕೆ.ಶಿವಕುಮಾರ್ ಹೇಳಿದಂತೆ ಕೇಳುತ್ತೇನೆ
ಕೆಪಿಸಿಸಿ ಅಧ್ಯಕ್ಷರಾಗಿ ಮೈಮೇಲೆ ಜ್ಞಾನ ಇಲ್ಲದೇ ಹೇಳಿಕೆ ಕೊಡುತ್ತಿದ್ದಾರೆ. ಡಿಕೆಶಿ ಹೆಸರು ಹೇಳಿ ಯಾರಾದರೂ ಆತ್ಮಹತ್ಯೆ ಮಾಡಿದ್ರೆ ಡಿ.ಕೆ. ಶಿವಕುಮಾರ್ ಆತ್ಮಹತ್ಯೆಗೆ ಹೊಣೆಯಾಗುತ್ತಾರಾ?. ನನಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಮುಖ ಪರಿಚಯ ಇರಲಿಲ್ಲ. ಬಿ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್, “ಸುಪ್ರೀಂʼಗೆ ಹೋಗಲಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.