ಮೈಸೂರು : ಮೈಸೂರು ನಲ್ಲಿ ಕಾಡು ಪ್ರಾಣಿಗಳ ದಾಳಿ ಮುಂದುವರೆದಿದ್ದು ಚಿರತೆ ದಾಳಿಯಿಂದ ಕೂಲಿ ಕಾರ್ಮಿಕನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಣಗೋಡು ಹೋಬಳಿಯ ಕಣಗಾಲು ಗ್ರಾಮದಲ್ಲಿ ನಡೆದಿದೆ.
ಕಣಗಾಲು ಗ್ರಾಮದ ಮಾದೇಶ ನಾಯಕಗೆ ಚಿರತೆ ದಾಳಿಯಿಂದ ಗಂಭೀರವಾದ ಗಾಯಗಳಾಗಿದ್ದು, ಬುರು ಮರಗಳಲ್ಲಿ ಮರಾಠ ಮೊಗ್ಗು ಸಂಗ್ರಹಿಸಲು ತೆರಳಿದ್ದಾಗ ಚಿರತೆ ದಾಳಿ ಮಾಡಿದೆ. ಈ ವೇಳೆ ಮಾದೇಶನಿಗೆ ಕುತ್ತಿಗೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಗಯಾಳುವಿಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.








