ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ ಈ ಕೆಳಗಿನ ರೈಲುಗಳಿಗೆ ಕಿರಲೋಸ್ಕರವಾಡಿ, ಸಾಂಗ್ಲಿ ಮತ್ತು ಲೋನಾವಲಾ ನಿಲ್ದಾಣಗಳಲ್ಲಿ ಪ್ರಾಯೋಗಿಕ ನಿಲುಗಡೆಗಳನ್ನು ಮುಂದಿನ ಆದೇಶದ ಬರುವವರೆಗೆ ಮುಂದುವರಿಸಲು ಮಧ್ಯ ರೈಲ್ವೆ ನಿರ್ಧರಿಸಿದೆ.
1. ವಾಸ್ಕೋ-ಡ-ಗಾಮಾ ಮತ್ತು ಹಜರತ್ ನಿಜಾಮುದ್ದೀನ್ ನಡುವೆ ಸಂಚರಿಸುವ (ರೈಲು ಸಂಖ್ಯೆ 12779/12780) ಡೈಲಿ ಎಕ್ಸ್‌ಪ್ರೆಸ್ ರೈಲು ಇದೇ ವರ್ಷದ ಅಕ್ಟೋಬರ್ 8 ರಿಂದ ಕಿರಲೋಸ್ಕರವಾಡಿ ನಿಲ್ದಾಣದಲ್ಲಿ ನಿಲುಗಡೆ ಹೊಂದುವುದನ್ನು ಮುಂದುವರಿಸಲಿದೆ.
2. ಯಶವಂತಪುರ-ಚಂಡೀಗಢ ನಡುವೆ ಸಂಚರಿಸುವ (22685/22686) ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ ಅಕ್ಟೋಬರ್ 8, 2025 ರಿಂದ ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆ ಹೊಂದುವುದನ್ನು ಮುಂದುವರಿಸಲಿದೆ.
3. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಹೊಸಪೇಟೆ ನಡುವೆ ಸಂಚರಿಸುವ (11139/11140) ಡೈಲಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 11 ರಿಂದ ಲೋನಾವಲಾ ನಿಲ್ದಾಣದಲ್ಲಿ ನಿಲುಗಡೆ ಹೊಂದುವುದನ್ನು ಮುಂದುವರಿಸಲಿದೆ.
ಭಾರತ-ಪಾಕ್ ನಡುವೆ ಯುದ್ಧ ಕಾರ್ಮೋಡ: ಬಜೆಟ್ ನಲ್ಲಿ ರಕ್ಷಣಾ ವೆಚ್ಚ ಶೇ.18ರಷ್ಟು ಹೆಚ್ಚಿಸಿದ ಪಾಕಿಸ್ತಾನ
“ರೈಲು ಬೋಗಿಯಂತೆ ಮೀಸಲಾತಿ…”: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಮಹತ್ವದ ಹೇಳಿಕೆ…!