ಮಂಗಳೂರು: ಪಾಸ್ಪೋರ್ಟ್ನಲ್ಲಿ ಒಂದೇ ಹೆಸರು ಇರುವವರು ಇನ್ನು ಮುಂದೆ ಯುಎಇಗೆ ಪ್ರವಾಸ, ಸಂದರ್ಶನ ಅಥವಾ ಯಾವುದೇ ಉದ್ದೇಶಕ್ಕೆ ವೀಸಾ ಮೂಲಕ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
BREAKING NEWS : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತ
ಪಾಸ್ ಪೋರ್ಟ್ ಮತ್ತು ವೀಸಾದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಹೆಸರು ಇರಲೇಬೇಕು. ಇಲ್ಲದಿದ್ದಲ್ಲಿ ಪ್ರವೇಶವಿಲ್ಲ ಎಂದು ಯುಎಇ ಆಡಳಿತ ಸೂಚನೆ ಹೊರಡಿಸಿದ್ದು, ನವೆಂಬರ್ 21 ರಿಂದಲೇ ಈ ನಿಯಮ ಜಾರಿಗೆ ತಂದಿದೆ. ಈ ಮಾಹಿತಿಯನ್ನು ವಿಮಾನ ಯಾನ ಸಂಸ್ಥೆಗಳು ತಮ್ಮ ವೆಬ್ಸೈಟ್ನಲ್ಲಿ ಹಂಚಿಕೊಂಡಿವೆ.
BREAKING NEWS : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತ
ಹೀಗಿದ್ದರೂ, ಪಾಸ್ಪೋರ್ಟ್ನಲ್ಲಿ ಒಂದೇ ಹೆಸರಿದ್ದು, ಅದೇ ಹೆಸರಿನ ನಿವಾಸ ಪರವಾನಗಿ ಅಥವಾ ಉದ್ಯೋಗ ವೀಸಾವಿದ್ದರೆ, ಅಂಥವರು ಅದೇ ಹೆಸರನ್ನು ‘ಮೊದಲ ಹೆಸರು’ ಮತ್ತು ‘ಉಪನಾಮ’ (ಸರ್ನೇಮ್) ಕಾಲಂನಲ್ಲಿ ನವೀಕರಿಸಿದರೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
BREAKING NEWS : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತ
ಒಂದೇ ಹೆಸರು ಇರುವವರಿಗೆ ನಿಬಂಧನೆ ಹೇರಿರುವ ಹಿನ್ನೆಲೆಯಲ್ಲಿ ಪ್ರವಾಸಿ (ಟೂರಿಸ್ಟ್) ಅಥವಾ ಸಂದರ್ಶನ (ವಿಸಿಟ್) ವೀಸಾದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಪಾಸ್ಪೋರ್ಟ್ನಲ್ಲಿ ವಿಜಯ ಕುಮಾರ್ ಎಂಬ ಹೆಸರು ಇರುವವರು ‘ಸರ್ ನೇಮ್’ ಎಂದು ಇರುವಲ್ಲಿ ಸಂಪೂರ್ಣ ಹೆಸರು ಬರೆದು, ಫಸ್ಟ್ ನೇಮ್ ಎಂದು ಇರುವಲ್ಲಿ ಖಾಲಿ ಬಿಡುವಂತಿಲ್ಲ.
ಸರ್ ನೇಮ್ ಇರುವಲ್ಲಿ ‘ಕುಮಾರ್’ ಎಂದೂ, ಫಸ್ಟ್ ನೇಮ್ ಇರುವಲ್ಲಿ ವಿಜಯ್ ಎಂದೂ ಬರೆಯಬೇಕು. ವಿಜಯ್ ಕುಮಾರ್ ಎಂದು ಒಟ್ಟಿಗೆ ‘ಫಸ್ಟ್ ನೇಮ್’ ಎಂದು ಬರೆಯುವಂತಿಲ್ಲ. ಮಧ್ಯೆ ಜಾಗ ಬಿಟ್ಟು ಬರೆಯಬೇಕು. ವಿಶೇಷವಾಗಿ ‘ಚೆಕ್ ಇನ್’ ಸಂದರ್ಭ ವಿಜಯ್ ಪ್ರಥಮ ಹೆಸರು ಮತ್ತು ಕುಮಾರ್ ‘ಕೊನೆಯ ಹೆಸರು’ ಎಂದು ನಮೂದಿಸಬೇಕು.
BREAKING NEWS : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತ
ದಶಕಗಳ ಹಿಂದೆ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ಪಾಸ್ಪೋರ್ಟ್ನಲ್ಲಿ ಮೂರು ಹೆಸರು ಕಡ್ಡಾಯವಾಗಿತ್ತು. ಆಗ ಎಲ್ಲರೂ ಮೂರು ಹೆಸರು ಹಾಕುತ್ತಿದ್ದರು. ಹಿಂದೆ ಇದ್ದ ಒಂದು ಹೆಸರಿಗೆ ಉಪನಾಮ, ತಂದೆಯ ಹೆಸರು, ಊರಿನ ಹೆಸರೂ ಸೇರಿಸುತ್ತಿದ್ದರು. ಅದಕ್ಕಾಗಿ ಅಫಿಡವಿಟ್, ಹೆಸರು ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಮದುವೆಯಾದ ಮಹಿಳೆಯರು ಪತಿಯ ಹೆಸರು ಸೇರಿಸಿ, ಮೂರು ಹೆಸರು ಮಾಡಿಕೊಳ್ಳುತ್ತಿದ್ದರು.