ರಾಮನಗರ:ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆಯನ್ನು ಕೊಡುಗೆಯಾಗಿ ಶ್ರೀರಾಮ ಭಕ್ತರಿಂದ ಸಮರ್ಪಣೆ ಮಾಡಲಾಗುತ್ತಿದೆ
Viral News : ಅಭಿಮಾನಿಗಳ ಶರ್ಟ್ ಮೇಲೆ ಆಟೋಗ್ರಾಫ್ ಬರೆದ ಎಂ.ಎಸ್. ಧೋನಿಯ ವಿಡಿಯೋ ವೈರಲ್ | Watch
ಅಯೋಧ್ಯೆಯ ರಾಮಮಂದಿರ ಹಿಂದೂ ದೇವಾಲಯವಾಗಿದ್ದು, ಇದನ್ನು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ. ಇತ್ತಿಚೆಗೆ ಪ್ರಧಾನಿ ನರೇಂದ್ರಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. ಈ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಯನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ
Viral News : ಅಭಿಮಾನಿಗಳ ಶರ್ಟ್ ಮೇಲೆ ಆಟೋಗ್ರಾಫ್ ಬರೆದ ಎಂ.ಎಸ್. ಧೋನಿಯ ವಿಡಿಯೋ ವೈರಲ್ | Watch
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಿದ್ದು, ಇಂದು ರಾಮನ ಭಕ್ತರಿಂದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.
Viral News : ಅಭಿಮಾನಿಗಳ ಶರ್ಟ್ ಮೇಲೆ ಆಟೋಗ್ರಾಫ್ ಬರೆದ ಎಂ.ಎಸ್. ಧೋನಿಯ ವಿಡಿಯೋ ವೈರಲ್ | Watch
ಇತ್ತೀಚೆಗೆ ರಾಮಜನ್ಮಭೂಮಿಯ ಟ್ರಸ್ಟ್ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ರಾಮಮಂದಿರ ವಿನ್ಯಾಸ ಹೇಗಿದೆ?:
ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು-ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಒಂದು ಮಹಡಿಯ ರಾಮ ಮಂದಿರ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆ ನೆಲ ಮಹಡಿಯಲ್ಲಿ 106 ಕಂಬಗಳ ನಿರ್ಮಾಣವಾಗಲಿದ್ದು, ಒಂದೊಂದು ಕಂಬವು 15.6 ಅಡಿ ಉದ್ದ ಇರಲಿವೆ. ಅದೇ ರೀತಿ ಮೊದಲ ಮಹಡಿಯಲ್ಲೂ 14.6 ಅಡಿ ಉದ್ದದ 106 ಕಂಬಗಳ ನಿರ್ಮಾಣವಾಗಲಿವೆ. ಪ್ರತಿಕಂಬದಲ್ಲಿ 16 ಮೂರ್ತಿಗಳ ಕೆತ್ತನೆ ಇರಲಿದೆ.
Viral News : ಅಭಿಮಾನಿಗಳ ಶರ್ಟ್ ಮೇಲೆ ಆಟೋಗ್ರಾಫ್ ಬರೆದ ಎಂ.ಎಸ್. ಧೋನಿಯ ವಿಡಿಯೋ ವೈರಲ್ | Watch
ನೆಲಮಹಡಿಯ ಒಂದು ಭಾಗದಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ನಿರ್ಮಾಣ ಹಾಗೂ ಮೊದಲ ಮಹಡಿಯಲ್ಲಿ ರಾಮನ ದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ) ನಿರ್ಮಿಸಲಾಗುತ್ತದೆ. ಮೊದಲ ಮಹಡಿಯ ಎದುರಿನ ಭಾಗ 140 ಅಡಿ ಹಾಗೂ ಬಲಭಾಗ 268 ಅಡಿ ಇರಲಿದೆ. ಹಿಂದಿನ ಭಾಗದ ನೆಲ ಮಹಡಿ 18 ಅಡಿ ಮತ್ತು ಮೊದಲ ಮಹಡಿಯ ಒಂದು ಭಾಗ 15.9 ಅಡಿ ಇರಲಿದೆ. ರಾಮ ಮಂದಿರಕ್ಕೆ ಒಟ್ಟು 24 ಬಾಗಿಲುಗಳಿವೆ.
Viral News : ಅಭಿಮಾನಿಗಳ ಶರ್ಟ್ ಮೇಲೆ ಆಟೋಗ್ರಾಫ್ ಬರೆದ ಎಂ.ಎಸ್. ಧೋನಿಯ ವಿಡಿಯೋ ವೈರಲ್ | Watch