ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಾವಿರಾರು ಅತಿಥಿಗಳ ಸಮ್ಮುಖದಲ್ಲಿ ರಾಮಲಲ್ಲಾನ ಮಹಾಭಿಷೇಕ, ಪ್ರಾಣ ಪ್ರತಿಷ್ಠಾ ಸಮಾರಂಭ ಅಯೋಧ್ಯೆಯಲ್ಲಿ ನಡೆಯಿತು. ಈ ನಡುವೆ ದೇವಾಲಯ ಹಾಗೂ ಅದರ ನಿರ್ಮಾಣದ ಕುರಿತ ಕೆರಲು ಅಚ್ಚರಿ ಸಂಗತಿಗಳು ಹೊರಬೀಳುತ್ತಿವೆ. ಅಂತೆಯೇ ರಾಮಮಂದಿರ ನಿರ್ಮಾಣಕ್ಕೆ ಬರೀ 45ದಿನಗಳಲ್ಲಿ ಬಂದ ಹಣದ ಮಾಹಿತಿ ದೊರಕಿದೆ.
ಅಯೋಧ್ಯಾ ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಮಂದಿರ ನಿರ್ಮಾಣದ ಕಾರ್ಯ ತಕ್ಷಣ ಆರಂಭವಾಯಿತು. ಇದಕ್ಕೆ ಸರ್ಕಾರ ತಾನು ಒಂದು ರೂಪಾಯಿ ನೀಡುವುದಿಲ್ಲ, ಭಕ್ತಾದಿಗಳು ನೀಡುವ ದೇಣೆಗೆಯಿಂದಲೇ ಮಂದಿರ ನಿರ್ಮಾಣ ಆಗುತ್ತದೆ ಎಂದಿತು. ಅಂತೆಯೇ ಈ ನಿಧಿ ಸಂಗ್ರಹ ಅಭಿಯಾನವು ಜನವರಿ 14, 2021 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 27, 2021ರಂದು ಮುಕ್ತಾಯಗೊಂಡಿತ್ತು. ಕೇವಲ 45 ದಿನಗಳಲ್ಲಿ, 10 ಕೋಟಿಗೂ ಹೆಚ್ಚು ಜನರು ನೀಡಿದ ದೇಣಿಗೆ 2500 ಕೋಟಿ ರೂಪಾಯಿ. ‘ಶ್ರೀರಾಮ ಮಂದಿರ ನಿಧಿ ಸಮರ್ಪಣ’ ಎಂದು ಹೆಸರಿಸಲಾದ ಈ ದೇಣಿಗೆ ಅಭಿಯಾನವು ನಾಲ್ಕು ಲಕ್ಷ ಹಳ್ಳಿಗಳನ್ನು ತಲುಪಿತು. ಆರಂಭದಲ್ಲಿ ದೇಣಿಗೆ ಅಭಿಯಾನವನ್ನು 400 ವಿವಿಧ ಸ್ಥಳಗಳಿಂದ ಏಕಕಾಲದಲ್ಲಿ ಪ್ರಾರಂಭಿಸಲಾಯಿತು. ನಂತರ ಈ ಅಭಿಯಾನವು ಪ್ರಪಂಚದಾದ್ಯಂತ 10 ಕೋಟಿಗೂ ಹೆಚ್ಚು ಜನರು ಈ ಸಮಯದಲ್ಲಿ ದೇಣಿಗೆ ನೀಡಿದ್ದಾರೆ. ಅಲ್ಲದೆ ವಿಶ್ವದ ಅತಿ ದೊಡ್ಡ ದೇಣಿಗೆ ಅಭಿಯಾನ ಎಂಬ ಹೆಗ್ಗಳಿಕೆಗೆ ರಾಮಮಂದಿರ ನಿರ್ಮಾಣ ನಿಧಿಯನ್ನು ಸಂಗ್ರಹ ಅಭಿಯಾನ ಪಾತ್ರವಾಗಿದೆ. ವಿ.ಹೆಚ್.ಪಿ ತನ್ನ ಅಭಿಯಾನವನ್ನು ದೇಶದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮತ್ತು ಅವರ ಕುಟುಂಬದ ಪರವಾಗಿ ₹500,100 ದೇಣಿಗೆಯೊಂದಿಗೆ ಪ್ರಾರಂಭಿಸಿತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇದನ್ನು ಅನುಸರಿಸಿದರು, ಜೊತೆಗೆ ಹಲವಾರು ರಾಜ್ಯಗಳ ರಾಜ್ಯಪಾಲರು ಮತ್ತು ಸಿಎಂಗಳು ದೇವಾಲಯ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆಯಾಗಿದೆ.