ಯಾದಗಿರಿ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ೪೦೦ಕ್ಕೂ ಹೆಚ್ಚು ಸ್ಥಾನ ಬಂದರೆ ಸಂವಿಧಾನದಲ್ಲಿ ಬದಲಾವಣೆ ಮಾಡಲಾಗುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಇದೀಗ ಅದೇ ಪಕ್ಷದ ಮಾಜಿ ಸಚಿವರಾದ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದ್ದು ಹೆಗಡೆಯಲ್ಲ ಅವರ ಅಪ್ಪ ಹುಟ್ಟಿ ಬಂದರೂ ಕೂಡ ಸಂವಿಧಾನ ಬದಲಾಯಿಸಲು ಆಗಲ್ಲ ಎಂದು ಕಿಡಿ ಕಾರಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ: ರಾಮ್ ನಾಥ್ ಕೋವಿಂದ್ ಸಮಿತಿಯ 8 ಪ್ರಮುಖ ಶಿಫಾರಸುಗಳು ಹೀಗಿವೆ
ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಬಿಜೆಪಿಯ ಕೆಲವು ನಾಯಕರು ಕೆಲವೊಂದು ಗಾಳಿಯೊಳಗೆ ಗೆದ್ದು ಬಿಡ್ತಾರೆ. ಕೆಲವೊಂದು ಹುಚ್ಚುಚ್ಚು ಭಾಷಣ ಮಾಡಿ ಗೆದ್ದು ಬಿಡ್ತವೆ. ಗೆದ್ದು 4 ವರ್ಷದಿಂದ ಮಾಯ ಆಗ್ತಾರೆ. ಕೊನೆಯ 15 ದಿನದಲ್ಲಿ ಬಂದು ಬಾಯಿಗೆ ಬಂದಂಗೆ ಮಾತಾಡ್ತಾರೆ. ಹುಚ್ಚುಚ್ಚು ಮಾತಾಡುವಂತವರಿಗೆ ಬಿಜೆಪಿ ಏನು ಶಿಕ್ಷೆ ಕೊಡಬೇಕು ಕೊಡುತ್ತದೆ. ಬಾಯಿ ಮಾತಿನಿಂದ ಕೊಡಲ್ಲ, ಕಾದು ನೋಡಿ ಗೊತ್ತಾಗ್ತದೆ ಎಂದು ತಿರುಗೇಟು ಕೊಟ್ಟರು.
ಅವಿವಾಹಿತ ಅತಿಥಿಗಳೊಂದಿಗೆ ಮಲಗುವ ಮುನ್ನ ಅನುಮತಿ ಪಡೆಯಿರಿ: ನೋಯ್ಡಾದ ಹೈ-ರೈಸ್ ಅಸೋಸಿಯೇಷನ್
ಒಬ್ಬ ಹೆಗಡೆ ಎನ್ನುವವನು ಎಲ್ಲೋ ಮಾತಾಡಿದ್ದಾನೆ. ಸಂವಿಧಾನ ಚೇಂಜ್ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್ ಮಾಡೋಕೂ ಆಗಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.