ಹಾಸನ: ಜಿಲ್ಲೆಯ ದಾಸರಕೊಪ್ಪಲಿನಲ್ಲಿ ಬಳಿ ಗಲಾಟೆ ಮಾಡಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ಪೊಲೀಸ್ ಕಾನ್ಸ್ಟೇಬಲ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.
BREAKING NEWS: ಅಕ್ರಮ ಹಣ ವರ್ಗಾವಣೆ ಕೇಸ್; ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ ವಿಚಾರಣೆ ಡಿ.15ಕ್ಕೆ ಮುಂದೂಡಿಕೆ
ಲೋಹಿತ್ ಗಾಯಗೊಂಡಿರುವ ಪೊಲೀಸ್ ಕಾನ್ಸ್ಟೇಬಲ್.ಲೋಹಿತ್ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತಮ್ಮ ಸಂಬಂಧಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಾಸನದ ದಾಸರಕೊಪ್ಪಲಿಗೆ ಬಂದಿದ್ದರು. ಸಾವಿನ ಮನೆಯ ಬಳಿ ಕೆಲ ಯುವಕರು ಗಲಾಟೆ ಮಾಡುತ್ತಿದ್ದು, ಈ ವೇಳೆ ಕಾನ್ಸ್ಟೇಬಲ್ ಲೋಹಿತ್ ಇಲ್ಲಿ ಗಲಾಟೆ ಮಾಡಬೇಡಿ ಎಂದು ಯುವಕರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.
ತಕ್ಷಣಕ್ಕೆ ಯುವಕರು ಆ ಸ್ಥಳದಿಂದ ತೆರಳಿದ್ದು, ಮತ್ತೆ ವಾಪಸ್ ಬಂದು ಕಾನ್ಸ್ಟೇಬಲ್ ಲೋಹಿತ್ಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಕಾನ್ಸ್ಟೇಬಲ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.