ತುಮಕೂರು: ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿದ್ದ ಸಂಬಂಧ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರು ತಮ್ಮ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಡಿಜಿ ಮತ್ತು ಐಜಿಪಿ ಭೇಟಿಯಾಗಿ ದೂರು ನೀಡಿದ್ದರು. ಆ ನಂತ್ರ ತುಮಕೂರು ಎಸ್ಪಿಗೂ ದೂರು ನೀಡಿದ್ದರು. ಈ ದೂರು ಆಧರಿಸಿ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎ1 ಆರೋಪಿಯಾಗಿಸಿ ಸೋಮು, ಎ2 ಭರತ್, ಎ3 ಅಮಿತ್, ಎ4 ಗುಂಡ ಹಾಗೂ ಎ5 ಯತೀಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕ, ಎಂಎಲ್ಸಿ ರಾಜೇಂದ್ರ ಹತ್ಯೆ ಪ್ರಕರಣ ಬಹಿರಂಗಗೊಂಡಿತ್ತು. ಆರೋಪಿಗಳು ರಾಜೇಂದ್ರ ಸುಫಾರಿಯ ಬಗ್ಗೆ ಆಡಿಯೋದಲ್ಲಿ ಮಾತುಕತೆ ನಡೆಸಿದ್ದರು.
ಆರೋಪಿಗಳಾದಂತ ಸೋಮು, ಭರತ್, ಅಮಿತ್, ಗುಂಡ ಹಾಗೂ ಯತೀಶ್ ಮಾತನಾಡಿದ್ದಂತ ಆಡಿಯೋದಲ್ಲಿ ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ್ದು ಬಹಿರಂಗವಾಗಿತ್ತು.
70 ಲಕ್ಷಕ್ಕೆ ಡೀಲ್ ಮಾಡಿದ್ದಂತ ಆರೋಪಿಗಳು, 5 ಲಕ್ಷ ಮುಂಗಡವಾಗಿ ಹಣವನ್ನು ಪಡೆದಿದ್ದರು. ರಾಜೇಂದ್ರ ಅವರ ಮಗಳ ಜನ್ಮದಿನದಂದೆ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಆದರೇ ಸಮಯ ಸಂದರ್ಭ ಕೂಡಿ ಬಾರದ ಕಾರಣ ಕೃತ್ಯ ಎಸಗಲು ಆಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡೋದಕ್ಕೆ ಸ್ಕೆಚ್ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾ.31ರಂದು ಸಾಗರದಲ್ಲಿ ಈಡಿಗರ ಸಮುದಾಯ ಭವನ, ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ