ಬೆಂಗಳೂರು : NDPS ಪ್ರಕರಣಗಳಲ್ಲಿ ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆಯ ತೂಕ ಬಿಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ, ಹೂವಿನ ತೂಕ ಪರಿಗಣಿಸದಂತೆ ಆರೋಪಿ ರಂಗಪ್ಪ ಎಂಬಾತ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗಾಂಜಾ ಪ್ರಮಾಣವನ್ನು ನಿರ್ಧರಿಸುವಾಗ ಗಾಂಜಾದ ಬೀಜ, ಎಲೆ, ಹೂವಿನ ತೂಕ ಬಿಡುವಂತಿಲ್ಲ, ಅದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿ ಆರೋಪಿ ರಂಗಪ್ಪ ಅರ್ಜಿಯನ್ನು ತಳ್ಳಿ ಹಾಕಿದೆ.
ಗಾಂಜಾ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಪೀಠ ಈ ಬಗ್ಗೆ ಆದೇಶ ಹೊರಡಿಸಿದೆ.ಗಾಂಜಾ ಗಿಡದ ಬೀಜ, ಎಲೆ. ಹೂಗಳನ್ನು ಪರಿಗಣಿಸಬೇಕು, ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ ತೂಕವನ್ನು ಕಳೆಯುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಆರೋಪಿ ಪರ ವಕೀಲದ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.ಇತ್ತೀಚೆಗೆ ಆರೋಪಿ ರಂಗಪ್ಪನಿಂದ 750 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ನಂತರ ಆರೋಪಿ ಗಾಂಜಾದ ಹೂ, ಎಲೆ, ಬೀಜದ ತೂಕವನ್ನು ಪರಿಗಣಿಸದಂತೆ ಹೈಕೋರ್ಟ್ ಗೆ ಸಲ್ಲಿಸಿದ್ದನು, ಅರ್ಜಿದಾರರ ಜಾಮೀನು ಅರ್ಜಿ ಪರಿಗಣಿಸಬೇಕಾದರೂ, ಗಾಂಜಾದ ವಾಣಿಜ್ಯ ಪ್ರಮಾಣ ಪರಿಗಣಿಸಬೇಕಾಗುತ್ತದೆ. ಗಿಡದ ಬೀಜ, ಎಲೆ, ಹೂವುಗಳ ತೂಕವನ್ನೂ ಸೇರಿಸಿದರೆ ಗಾಂಜಾ ಪ್ರಮಾಣ ನಿಗದಿತ ಮಿತಿಗಿಂತ ಜಾಸ್ತಿ ಇದೆ. ಹಾಗಾಗಿ ಜಾಮೀನು ನೀಡಲಾಗದು ಎಂದು ಕೋರ್ಟ್ ಆದೇಶಿಸಿದೆ.
BIGG NEWS : ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ : ಸಚಿವ ಆರ್.ಅಶೋಕ್
ಹತ್ತು ದಿನದೊಳಗೆ ‘ಮಂಗಳೂರು ವಿವಿ’ ಪದವಿ ಫಲಿತಾಂಶ ಪ್ರಕಟ : ಸಚಿವ ಅಶ್ವತ್ಥನಾರಾಯಣ |Mangalore University