ನವದೆಹಲಿ: ಸಮಾಧಿಯಾದ ಮೃತದೇಹಗಳನ್ನು ಹೊರತೆಗೆಯಲು ಭಾರತದಲ್ಲಿ ಯಾವುದೇ ಕಾನೂನು ಇಲ್ಲ ಎಂದಿರುವ ಸುಪ್ರೀಂ, ತಂದೆಯೊಬ್ಬರು ಮಗನ ಮೃತದೇಹ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
2021ರ ನವೆಂಬರ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರೊಂದಿಗೆ ಸಾವನ್ನಪ್ಪಿದ ತನ್ನ ಮಗ ಅಮೀರ್ ಮ್ಯಾಗ್ರೆ ಶವವನ್ನು ತಮಗೆ ಹಸ್ತಾಂತರಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರದ ನಿವಾಸಿ ಲತೀಫ್ ಮ್ಯಾಗ್ರೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
“ಮೃತದೇಹವನ್ನು ಸಮಾಧಿ ಮಾಡಿದ ನಂತರ, ಅದನ್ನು ಕಾನೂನಿನ ವಶದಲ್ಲಿ ಪರಿಗಣಿಸಲಾಗುತ್ತದೆ. ಆದ್ದರಿಂದ, ಅದನ್ನು ಹೊರ ತೆಗೆಯುವುದು ಸರಿಯಾದ ಕ್ರಮವಲ್ಲ. ಸಮಾಧಿ ಮಾಡಿದ ದೇಹವನ್ನು ಅಡ್ಡಿಪಡಿಸುವುದು ಅಥವಾ ತೆಗೆದುಹಾಕುವುದು ನ್ಯಾಯಾಲಯದ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟಿರುತ್ತದೆ. ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸಾರ್ವಜನಿಕ ನೀತಿಯ ಆಧಾರದ ಮೇಲೆ ಕಾನೂನು ವಿಘಟನೆಯ ಪರವಾಗಿಲ್ಲ. ಒಮ್ಮೆ ಸಮಾಧಿ ಮಾಡಿದ ನಂತರ ದೇಹವನ್ನು ಹೊರತೆಗೆಯಬಾರದುʼ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಹೇಳಿದೆ.
ಲಕ್ನೋ: ಆಕಾಶದಲ್ಲಿ ʻನಿಗೂಢ ದೀಪದ ಸಾಲುʼ ಪತ್ತೆ… ಏನಿದು?… VIDEO ನೋಡಿ
ಕಳೆದ ವರ್ಷ ನವೆಂಬರ್ನಲ್ಲಿ ಇತರ ಮೂವರು ಭಯೋತ್ಪಾದಕರೊಂದಿಗೆ ಹೈದರ್ಪೋರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಅಮೀರ್ ಮ್ಯಾಗ್ರೆ ಕೊಲ್ಲಲ್ಪಟ್ಟರು. ಅವರ ತಂದೆ, ಮೊಹಮ್ಮದ್ ಲತೀಫ್ ಮ್ಯಾಗ್ರೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಂತೆ ಮೃತದೇಹವನ್ನು ಹೊರತೆಗೆಯಲು ಮನವಿ ಮಾಡಿದ್ದರು.
ಲತೀಫ್ ಮ್ಯಾಗ್ರೆ ಅವರು ಮೊದಲಿಗೆ ಮೃತದೇಹಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಅವರ ಮನವಿಯನ್ನು ತಿರಸ್ಕರಿಸಲಾಯಿತು. ನಂತ್ರ, ಕುಟುಂಬಸ್ಥರಿಗೆ ಮೃತದೇಹವನ್ನು ಕೊಡದೇ ವಡ್ಡರ್ ಪಯೀನ್ ಸ್ಮಶಾನದಲ್ಲೇ ಸಮಾಧಿ ಮಾಡಲಾಯಿತು.
ಅಮೀರ್ ಮ್ಯಾಗ್ರೆಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ನಂಬಿಕೆ ಮತ್ತು ವಿಧಿವಿಧಾನಗಳ ಪ್ರಕಾರವೇ ನೆರವೇರಿಸಿರುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಈ ಹಿನ್ನೆಲೆ, ಆತನ ತಂದೆ ಮೊಹಮ್ಮದ್ ಲತೀಫ್ ಮ್ಯಾಗ್ರೆ ಸಲ್ಲಿಸಿದ ಅರ್ಜಿಯನ್ನು ಸೋಮವಾರ ಸುಪ್ರೀಂ ವಜಾಗೊಳಿಸಿದೆ.
BIGG NEWS : ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ : FDA ಪ್ರಸಾದ್ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ