ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ರಾಜಕೀಯ ನಾಯಕರುಗಳು ಹೇಳಿಕೆಗಳನ್ನು ನೀಡುತ್ತಿದ್ದು ಇದೀಗ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಇದು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕ್ರಮವಾಗಿದ್ದು ಕಾಂಗ್ರೆಸ್ ವರಿಷ್ಠರ ನಿರ್ಧಾರ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠರ ನಿರ್ಧಾರ ನಾನು ಸ್ವಾಗತಿಸುತ್ತೇನೆ. ಎಂದು ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.ಇದು ಬಿಜೆಪಿ ಮತ್ತು ಸಂಘದ ರಾಜಕೀಯ ಕಾರ್ಯಕ್ರಮ ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾಡುತ್ತಿರುವುದು ತಪ್ಪು ಎಂದು ತಿಳಿಸಿದರು.
ಹಿಂದೂ ಧರ್ಮದ ಮುಖ್ಯಸ್ಥರು ಅಂದರೆ ಶಂಕರಾಚಾರ್ಯರು ಪ್ರಾಣ ಪ್ರತಿಷ್ಠಾಪನೆ ಶಂಕರಾಚಾರ್ಯರ ಪದ್ಧತಿ ಪ್ರಕಾರ ನಡೆಯಬೇಕು.ಅಥವಾ ಹಿಂದೂ ಧಾರ್ಮಿಕ ಪದಕ್ಕೆ ಪ್ರಕಾರ ನಡೆಸಬೇಕಿತ್ತು.ಆದರೆ ಈ ಕಾರ್ಯಕ್ರಮ ಮಾಡಿದರೆ ಆಮಂತ್ರಣ ಬೇಕಾಗಿಲ್ಲ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.
ಅಯೋಧ್ಯ ರಾಮಮಂದಿರ ಪ್ರಾಣತ್ ಪ್ರತಿಷ್ಠೆ ವಿಚಾರವಾಗಿ ನಾನು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮಹತ್ವದ ಪತ್ರ ಬರೆದಿದ್ದೆ. ಡಿಸೆಂಬರ್ 25ರಂದು ಖರ್ಗೆ ಅವರಿಗೆ ಪತ್ರ ಬರೆದಿದ್ದೆ. ಪ್ರಾಣ ಪ್ರತಿಷ್ಠಾಪನೆ ಹಿಂದೂ ಧರ್ಮವನ್ನು ಅಣಕಿಸುವಂತಿದೆ.ಹಿಂದೂ ಧಾರ್ಮಿಕ ಪದ್ಧತಿಯಂತೆ ಪ್ರಾಣ ಪ್ರತಿಷ್ಠೆ ನಡೆಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಸಿದ್ದಾರೆ.
ಮೂಲ ಶಂಕರಾಚಾರ್ಯರ ಪದ್ಧತಿ ಪ್ರಕಾರ ಆದ್ರೂ ನಡೆಸಬೇಕಿತ್ತು. ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನದ ಕಾರ್ಯ ನಡೆಯಬೇಕಿತ್ತು.ಆಗಮ ಶಾಸ್ತ್ರದ ಪಂಡಿತರು ಅರ್ಚಕರ ನೇತೃತ್ವದಲ್ಲಿ ನಡೆಯಬೇಕು.ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮ ಆಗಬಾರದು ಎಂದು ಎಂ ಎಲ್ ಸಿ ಬಿ ಕೆ ಹರಿಪ್ರಸಾದ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.