ಮೈಸೂರು : ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ವಿಚಾರ ಸಂಬಂಧಿಸಿದಂತೆ ಮಾಜಿ ಮಾಜಿ ಸಚಿವ ಕೆ.ಎಸ್ಈಶ್ವರಪ್ಪ ಹೇಳಿಕೆ ನೀಡಿದ್ದು,ʻ ಪಾಕಿಸ್ತಾನ – ಹಿಂದೂಸ್ತಾನ ಒಡೆದವರು ಕಾಂಗ್ರೆಸ್ಸಿಗರು ʼ ಎಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಖಂಡ ಭಾರತವನ್ನು ತುಂಡು ತುಂಡು ಮಾಡಿದವರು ಕಾಂಗ್ರೆಸ್ನವರು. ಪಾಕಿಸ್ತಾನ ಹಿಂದೂಸ್ತಾನವನ್ನು ಒಡೆದವರು ಕಾಂಗ್ರೆಸ್ಸಿಗರು. ಭಾರತ – ಪಾಕಿಸ್ತಾನ ಬೇರೆ ಬೇರೆ ಆಗಿರಬಾರದು.
ಪಾಕಿಸ್ತಾನ ಹಿಂದೂಸ್ತಾನ ಒಂದಾಗಬೇಕು. ದೇಶಭಕ್ತ ಮುಸ್ಲಿಮರ ಬಗ್ಗೆ ನಮಗೆ ಅಸಮಾಧಾನ ಇಲ್ಲ. ದೇಶದಲ್ಲೇ ಇದ್ದು, ದೇಶ ವಿರೋಧಿಗಳ ಬಗ್ಗೆ ಅಸಮಾಧಾನ ಇದೆ ಎಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮತನಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.