ಕೊಲ್ಲಂ (ಕೇರಳ): ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ‘ಭಾರತ್ ಜುಡೋ ಯಾತ್ರೆ’ಯನ್ನು ಎಂಟು ದಿನಗಳು ಕೇರಳದ ಕೊಲ್ಲಂನಲ್ಲಿ ಕಾಂಗ್ರೆಸ್ ಪಕ್ಷವು ಪಾದಯಾತ್ರೆ ಮಾಡಿದೆ. ಈ ವೇಳೆ ಕೈ ಕಾರ್ಯಕರ್ತರು ಮಾಡಿದ ಕೆಲವು ಕೆಲಸಗಳು ಈಗ ಬೆಳಕಿಗೆ ಬಂದಿವೆ.
ಹೌದು, ಕಾಂಗ್ರೆಸ್ನ ಕೆಲವು ಕಾರ್ಯಕರ್ತರು ಪಾದಯಾತ್ರೆ ವೇಳೆ ದಾರಿಯಲ್ಲಿ ಸಿಕ್ಕ ಅಂಗಡಿಗಳಿಗೆ ಹೋಗಿ ಅಂಗಡಿಯ ಮಾಲೀಕರಿಗೆ ಬೆದರಿಕೆ ಹಾಕಿ ಅಲ್ಲಿರುವ ವಸ್ತುಗಳನ್ನು ದೋಚಿದ್ದಾರೆ. ಅಷ್ಟೇ ಅಲ್ಲದೇ 2,000 ಬೇಡಿಕೆ ಇಟ್ಟಿದ್ದರು ಎಂಬ ಆರೋಗಳು ಕೇಳಿ ಬಂದಿವೆ. ಇದರ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಗೂಂಡಾಗಿರಿ ಆರೋಪದ ಟೀಕೆಗಳನ್ನು ಎದುರಿಸುತ್ತಿದೆ.
ಮತ್ತೊಂದು ಘಟನೆಯಲ್ಲಿ, ‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್ಗಳನ್ನು ಹೊತ್ತಿದ್ದ ಕೆಲವು ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ‘ಸ್ವೀಕಾರಾರ್ಹವಲ್ಲ’ ಎಂದು ಕರೆದಿರುವ ಪಕ್ಷವು, ಈ ಕೃತ್ಯದಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಿದೆ ಎಂದು ಹೇಳಿದೆ. “ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ ಮತ್ತು ಅಂತಹ ನಡವಳಿಕೆಯು ಕ್ಷಮಿಸಲಾಗದು” ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಟ್ವೀಟ್ ಮಾಡಿದ್ದಾರೆ.
Three party workers involved in an unacceptable incident in Kollam have been suspended with immediate effect. They do not represent our ideology and such behaviour is inexcusable. The party is crowdfunding small donations voluntarily unlike others who get corporate donations.
— K Sudhakaran (@SudhakaranINC) September 16, 2022
‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್ಗಳನ್ನು ಹೊತ್ತಿದ್ದ ಕೆಲವು ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ನಾಳೆ ನಮೀಬಿಯಾದಿಂದ ಭಾರತಕ್ಕೆ 8 ಚಿರತೆಗಳ ಆಗಮನ… ಅವುಗಳ ಫಸ್ಟ್ ಲುಕ್ ಇಲ್ಲಿದೆ ನೋಡಿ!
BIGG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ- ಪ್ರಿಯಾಂಕ್ ಖರ್ಗೆ