ನವದೆಹಲಿ : ಕಾಂಗ್ರೆಸ್ ಮಾಜಿ ಪ್ರಧಾನಿಗೆ ಬಿಜೆಪಿ ಪ್ರಧಾನಿ ಗೌರವಿಸಿದ್ದಾರೆ.ಭಾರತ ರತ್ನ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸಬೇಕು. ಆದರೆ ದುರಾದೃಷ್ಟವಶಾತ್ ಅವರು ಸಂತೋಷ ಪಡುತ್ತಿಲ್ಲ ಎಂದು ರಾಜ್ಯಸಭೆಯಲ್ಲಿ ಪಿಯುಷ್ ಗೊಯಲ್ ಲೇವಡಿ ಮಾಡಿದ್ದಾರೆ.
ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರು ವಿರುದ್ಧ ಆಕ್ರೋಶ ಅವರ ಹಾಕಿದ ಅವರು, ಕಾಂಗ್ರೆಸಿಗರು ಭಾರತ ರತ್ನ ಘೋಷಿಸಿದ್ದಕ್ಕೆ ಸಂಭ್ರಮಿಸುತ್ತಿಲ್ಲ. ಯಾಕೆಂದರೆ ಅವರ ಹೆಸರಿನ ಮುಂದೆ ಗಾಂಧಿ ನೆಹರು ಇಲ್ಲ ಭಾರತ ರತ್ನ ಪುರಸ್ಕೃತರ ಹೆಸರಲ್ಲಿ ಗಾಂಧಿ ಮತ್ತು ನೆಹರು ಇಲ್ಲ ಎಂದು ಅವರು ಲೇವಡಿ ಮಾಡಿದರು.
ಗಾಂಧಿ ಹಾಗೂ ನೆಹರು ಎಂಬ ಹೆಸರು ಇಲ್ಲದ್ದಕ್ಕೆ ಕಾಂಗ್ರೆಸ್ ನವರಿಗೆ ಅತೃಪ್ತಿ ಇದೆ. ಅವರು ಸ್ವಯಂ ಭಾರತರತ್ನ ಪಡೆಯುವುದರಲ್ಲಿ ಅವರು ತಲ್ಲೀನರಾಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪಿಯೂಷ್ ಗೋಯಲ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ತೊಂಬತ್ತರ ದಶಕದಲ್ಲಿ ಭಾರತದ ಪ್ರಧಾನಿಯಾಗಿದ್ದ ದಿವಂಗತ ಪಿ.ವಿ. ನರಸಿಂಹರಾವ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ. 1991ರಿಂದ 1996ರವರೆಗೂ ಪಿ.ವಿ. ನರಸಿಂಹ ರಾವ್ ದೇಶದ ಪ್ರಧಾನಿಯಾಗಿದ್ದರು.
ಅವರು ಭಾರತದ 9ನೇ ಪ್ರಧಾನಿ. ರಾಜೀವ್ ಗಾಂಧಿ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿತ್ತು. ಅದರ ಬೆನ್ನಲ್ಲೇ ರಾವ್ ಅವರಿಗೆ ಪ್ರಧಾನಿ ಪಟ್ಟ ಸಿಕ್ಕಿತು. ಲಾಲ್ ಬಹದ್ದೂರ್ ಶಾಸ್ತ್ರಿ ಬಳಿಕ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾದ ಮೊದಲ ಗಾಂಧಿಯೇತರ ಕುಟುಂಬದವರು ನರಸಿಂಹ ರಾವ್ ಎಂದು ಹೇಳಲಾಗುತ್ತಿದೆ.