ಬೆಂಗಳೂರು : ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ? ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ನಲ್ಲಿ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿದಿದೆ. ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ..? ಎಂದು ವಾಗ್ಧಾಳಿ ನಡೆಸಿದೆ.
ಇನ್ನೊಂದು ಟ್ವೀಟ್ ನಲ್ಲಿ ಬಿಜೆಪಿಗೆ ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ ಸರ್ಕಾರವೇ ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ. ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ, ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ? ಎಂದು ವಾಗ್ಧಾಳಿ ನಡೆಸಿದೆ.
ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ @BSBommai ಸರ್ಕಾರವೇ ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ.
ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ,
ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ.ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ? pic.twitter.com/Hi0Ad69YWR
— Karnataka Congress (@INCKarnataka) December 3, 2022
ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ?
ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ.ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿದಿದೆ.
ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ @BJP4Karnataka ಗೆ?
— Karnataka Congress (@INCKarnataka) December 3, 2022
ಸಿಎಂ ಬೊಮ್ಮಾಯಿ ರೌಡಿಗಳಿಗೆ ‘ಮಹಾಗುರು’ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
4-5 ವರ್ಷಗಳಲ್ಲಿ ಕರ್ನಾಟಕ ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಿಸುವ ರಾಜ್ಯವಾಗಲಿದೆ – ಸಿಎಂ ಬೊಮ್ಮಾಯಿ