ಬೆಂಗಳೂರು : ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ’ ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.
ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ. ಕಾಂಗ್ರೆಸ್ & ಕಂಪನಿಯದ್ದು ದಿನಕ್ಕೊಂದು ನಾಟಕ ಎಂದು ಜನತೆಗೆ ಚೆನ್ನಾಗಿ ಅರಿವಾಗಿದೆ. ನೀವು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯೂ ಆಗುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ ಎಂದಿದೆ.
ಇನ್ನೊಂದು ಟ್ವೀಟ್ ನಲ್ಲಿ ಚುನಾವಣಾ ಅಕ್ರಮವೆಸಗಿ ಆರು ವರ್ಷ ಅಲಹಾಬಾದ್ ಹೈಕೋರ್ಟ್ನಿಂದ ಇಂದಿರಾ ಗಾಂಧಿ ಶಿಕ್ಷೆಗೆ ಒಳಪಟ್ಟಿದ್ದರು. ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಸಿದ್ದರಾಮಯ್ಯರೇ ಈ ಚುನಾವಣಾ ಅಕ್ರಮಗಳನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ? ಎಂದಿದೆ .
ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸುವ ಏಕಮಾತ್ರ ಕಾರಣಕ್ಕಾಗಿ ಬ್ಯಾಲೇಟ್ ಪೇಪರ್ ಬಣ್ಣ ಬದಲಿಸಿ, ಜನರ ಹಾದಿ ತಪ್ಪಿಸಿ ವಾಮಮಾರ್ಗದಲ್ಲಿ ಕಾಂಗ್ರೆಸ್ ಸೋಲಿಸಿತ್ತು. ಮಾನ್ಯ ಸಿದ್ದರಾಮಯ್ಯನವರೇ, ಈ ಚುನಾವಣಾ ಅಕ್ರಮದ ಬಗ್ಗೆ ತಿಳಿದಿದೆಯೇ? ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.
ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ.
ಕಾಂಗ್ರೆಸ್ & ಕಂಪನಿಯದ್ದು ದಿನಕ್ಕೊಂದು ನಾಟಕ ಎಂದು ಜನತೆಗೆ ಚೆನ್ನಾಗಿ ಅರಿವಾಗಿದೆ.
ನೀವು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯೂ ಆಗುವುದಿಲ್ಲ, @INCKarnataka ಅಧಿಕಾರಕ್ಕೆ ಬರುವುದೂ ಇಲ್ಲ.
— BJP Karnataka (@BJP4Karnataka) November 17, 2022
ಕುಂಕುಮಧಾರಿಗಳನ್ನು ಕಂಡರೇ ಭಯಪಡುವ @siddaramaiah ನವರಿಗೆ ತಾಯಿ ಚಾಮುಂಡೇಶ್ವರಿಯನ್ನು ಕಂಡರೆ ಅದಿನ್ನೆಷ್ಟು ಭಯವಿರಬೇಡ ಪಾಪ. ಹಾಗಾಗಿ ಕ್ಷೇತ್ರದ ಹುಡುಕಾಟದಲ್ಲಿರುವ ಅವರಿಗೆ ಸಮಸ್ತ ಕರ್ನಾಟಕದಲ್ಲಿ ಸುಲಭ ಗೆಲುವಿಗೆ ಇರುವುದು ಅತಿಹೆಚ್ಚು ಅಲ್ಪಸಂಖ್ಯಾತ ಮತಗಳಿರುವ ಚಾಮರಾಜಪೇಟೆ ಕ್ಷೇತ್ರ ಮಾತ್ರ. pic.twitter.com/uN1EbDKjho
— BJP Karnataka (@BJP4Karnataka) November 17, 2022
ಚುನಾವಣಾ ಅಕ್ರಮವೆಸಗಿ ಆರು ವರ್ಷ ಅಲಹಾಬಾದ್ ಹೈಕೋರ್ಟ್ನಿಂದ ಇಂದಿರಾ ಗಾಂಧಿ ಶಿಕ್ಷೆಗೆ ಒಳಪಟ್ಟಿದ್ದರು.
ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು.
ಮಾನ್ಯ @siddaramaiah ಅವರೇ, ಈ ಚುನಾವಣಾ ಅಕ್ರಮಗಳನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ?
— BJP Karnataka (@BJP4Karnataka) November 17, 2022