ಬೆಂಗಳೂರು: ರಾಜ್ಯದ ಮುಂಬರುವಂತ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ರಣತಂತ್ರ ರೂಪಿಸಿದೆ. ಇದಕ್ಕಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಉಪ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ. ಇದಲ್ಲದೇ ಮಂಗಳೂರು-ಉಡುಪಿ ಕ್ಷೇತ್ರದ ಎಂಎಲ್ಸಿ ಕ್ಷೇತ್ರದ ಉಪ ಚುನಾವಣೆಗೂ ಕೆಪಿಸಿಸಿ ಕಮಿಟಿಯನ್ನು ರಚಿಸಿ ಆದೇಶಿಸಿದ್ದಾರೆ.
ಅಂದಹಾಗೇ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಚಿವ ಜಮೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸದಸ್ಯರನ್ನಾಗಿ ನಾಸೀರ್ ಹುಸೇನ್, ಇ.ತುಕಾರಾಂ, ಬಿ.ನಾಗೇಂದ್ರ, ಡಾ.ಎನ್ ಟಿ ಶ್ರೀನಿವಾಸ್, ಪಿಟಿ ಪರಮೇಶ್ವರ ನಾಯಕ್ ಹಾಗೂ ಬಳ್ಳಾರಿಯ ಡಿಸಿಸಿ ಅಧ್ಯಕ್ಷ ಶಿವಯೋಗಿ ಅವರನ್ನು ನೇಮಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಚಿವ ಚಲುವರಾಯ ಸ್ವಾಮಿ ಅವರನ್ನು ಉಪ ಚುನಾವಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇವರಡಿ ಸಚಿವ ರಾಮಲಿಂಗಾರೆಡ್ಡಿ, ಡಿ.ಕೆ ಸುರೇಶ್, ಬಾಲಕೃಷ್ಣ, ನರೇಂದ್ರಸ್ವಾಮಿ, ಇಕ್ಬಾಲ್ ಹುಸೇನ್, ಪುಟ್ಟಣ್ಣ, ಎಸ್.ರವಿ ಹಾಗೂ ರಾಮನಗರ ಡಿಸಿಸಿ ಅಧ್ಯಕ್ಷ ಗಂಗಾಧರ ಅವರಿಗೆ ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ.
ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ಈಶ್ವರ ಖಂಡ್ರೆ ನೇಮಕ ಮಾಡಲಾಗಿದೆ. ಇವರೊಂದಿಗೆ ಶಿವಾನಂದ ಪಾಚೀಲ್, ಸಂತೋಷ್ ಲಾಡ್, ಸಲೀಂ ಅಹ್ಮದ್, ಸಂಜೀವ್ ಕುಮಾರ್ ನೀರಲಗಿ ಹಾಗೂ ಆನಂದ್ ಗಡ್ಡದೇವರಮಠಗೆ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.
ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಉಪ ಚುನಾವಣೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ದಿನೇಶ್ ಗುಂಡೂರಾವ್ ನೇಮಕ ಮಾಡಲಾಗಿದೆ. ವಿರೊಂದಿಗೆ ವಿನಯ್ ಕುಮಾರ್ ಸೊರಕೆ, ಲಕ್ಷ್ಮೀ ಹೆಬ್ಬಾಳ್ಕರ್, ರಮಾನಾಥ ರೈ, ಅಶೋಕ್ ರೈ, ಡಾ.ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್, ಹರೀಶ್ ಕುಮಾರ್, ಉದಯ್ ಶೆಟ್ಟಿ ಹಾಗೂ ಕಿಶನ್ ಹೆಗ್ಡೆ ನೇಮಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯಾಧ್ಯಂತ ‘ಕನ್ನಡ ನಾಮಫಲಕ’ ಅಳವಡಿಸುವುದು ಕಡ್ಡಾಯ: ಹಾಕಿಲ್ಲ ಅಂದ್ರೆ ‘ಈ ನಂಬರ್’ಗೆ ಕರೆ ಮಾಡಿ ದೂರು ನೀಡಿ