ನವದೆಹಲಿ: ಇಂದು ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಇಬ್ಬರೂ ತಮ್ಮ ಮತ ಚಲಾಯಿಸಿದ್ದಾರೆ.
20 ವರ್ಷಗಳ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಗಾಂಧಿಯೇತರ ಅಧ್ಯಕ್ಷನನ್ನು ಹೊಂದಲು ಸಜ್ಜಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ದೇಶಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಕರ್ನಾಟಕದವರೇ ಆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದ ಬಳಿಕ ಚುನಾವಣೆ ಸ್ವರೂಪವೇ ಬದಲಾಗಿದೆ.
ಮಲ್ಲಿಕಾರ್ಜುನ ಖರ್ಗೆಯವರು ಬೇಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು ಇದು ನಮ್ಮ ಆಂತರಿಕ ಚುನಾವಣೆಯ ಒಂದು ಭಾಗವಾಗಿದೆ ಎಂದಿದ್ದಾರೆ.
Karnataka | Congress presidential election candidate Mallikarjun Kharge casts his vote in Bengaluru pic.twitter.com/bfIsEGfVPp
— ANI (@ANI) October 17, 2022
ಕೇರಳದ ಪಕ್ಷದ ಕಚೇರಿಯಲ್ಲಿ ಶೀ ತರೂರ್ ಅವರು ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಫಲಿತಾಂಶ ಏನೇ ಇರಲಿ, ಹಳೆಯ ಪಕ್ಷದ ಪುನರುಜ್ಜೀವನವು ಪ್ರಾರಂಭವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಭವಿಷ್ಯವು ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ ಎಂದು ಹೇಳಿದ್ದಾರೆ.
Congress Prez poll: “I believe revival of Congress has begun” Tharoor; Kharge says “Together have to build party”
Read @ANI Story | https://t.co/2G8a1FbdIG#ShashiTharoor #MallikarjunKharge #CongressPresidentPolls #CongressParty pic.twitter.com/XLNR3T9vJj
— ANI Digital (@ani_digital) October 17, 2022
ಕರ್ನಾಟಕದ ಬಳ್ಳಾರಿಯ ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮುಂದಿನ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಿದರು.
#WATCH | Congress MP Rahul Gandhi casts his vote to elect the next party president at Bharat Jodo Yatra campsite in Ballari, Karnataka
(Source: AICC) pic.twitter.com/9Jit8vIpVo
— ANI (@ANI) October 17, 2022
ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ ಚಲಾಯಿಸಿದ್ದಾರೆ.
Delhi | Former Prime Minister Dr Manmohan Singh casts his vote to choose the new Congress president pic.twitter.com/ETSvSdHKbk
— ANI (@ANI) October 17, 2022
ಸೋನಿಯಾ ಗಾಂಧಿ ಹಾಗೂ ಅವರ ಮಗಳು ಪ್ರಿಯಾಂಕ ವಾದ್ರಾ ಇಬ್ಬರೂ ಕೂಡ ಒಟ್ಟಿಗೆ ಬಂದು ತಮ್ಮ ಮತ ಚಲಾಯಿಸಿದರು.
#WATCH | “I have been waiting for a long time for this thing,” says Congress interim president Sonia Gandhi on the party’s presidential election pic.twitter.com/9giL5DeOEX
— ANI (@ANI) October 17, 2022
#WATCH | Congress interim president Sonia Gandhi & party leader Priyanka Gandhi Vadra cast their vote to elect the new party president, at the AICC office in Delhi pic.twitter.com/aErRUpRVv0
— ANI (@ANI) October 17, 2022