ಬೆಂಗಳೂರು : ನಿನ್ನೆ ಹಿಂದುಳಿದ ಆಯೋಗವು ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಇದಕ್ಕೆ ಪ್ರಬಲ ಸಮುದಾಯಗಳು ವಿರೋಧಪಕ್ಷಪಡಿಸುತ್ತಿದ್ದು ಇದೀಗ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಒಂಬತ್ತು ವರ್ಷಗಳ ಹಿಂದಿನ ಸರ್ವೆಯನ್ನು ಇದೀಗ ಸಲ್ಲಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮರಗಳನ್ನು ರಕ್ಷಿಸಲು ‘ಹೊಸ ಪ್ರಾಧಿಕಾರವನ್ನು’ ಸ್ಥಾಪಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸ್ವೀಕರಿಸುವುದು ತಪ್ಪಲ್ಲ ಆದರೆ ವೈಜ್ಞಾನಿಕವಾಗಿ ಇರಬೇಕು. ವರದಿ ವೈಜ್ಞಾನಿಕವಾಗಿ ಇಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದು, ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಉಪ ಪಂಗಡಗಳು ಇವೆ. ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಿರುವ ಮಾಹಿತಿ ಇದೆ ಎಂದು ತಿಳಿಸಿದರು.
ಪಾಕಿಸ್ತಾನ ಪರ ಘೋಷಣೆ ವಿಚಾರ :7 ಜನರ ವಿಚಾರಣೆಯಾಗಿದ್ದು, ‘FSL’ ವರದಿ ಬಂದ ನಂತರ ಕ್ರಮ: ಜಿ.ಪರಮೇಶ್ವರ್
ಆಯೋಗದ ಅಧ್ಯಕ್ಷರು ನಮ್ಮ ವರದಿ ವೈಜ್ಞಾನಿಕವಾಗಿ ಇದೆ ಅಂತ ಹೇಳುತ್ತಿದ್ದಾರೆ.ನಾವು ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತು ಮಾಡುತ್ತೇವೆ. 9 ವರ್ಷದ ಹಿಂದೆ ಮಾಡಿದ್ದ ಸರ್ವೆಯನ್ನು ಈಗ ಸಲ್ಲಿಕೆ ಮಾಡಲಾಗಿದೆ.ಮನೆಯಲ್ಲಿ ಕುಳಿತು ಜಾತಿಗಣತಿ ವರದಿ ತಯಾರಿಸಿದ ಮಾಹಿತಿ ಇದೆ.ಸರ್ಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ಮಾಡಬೇಕು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದರು.
ಅತಿ ಕಡಿಮೆ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಯ ಹಾರಾಟ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ‘DRDO’