ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಚನ್ನೈನಲ್ಲಿ ಹಾರ್ಟ್ ಆಪರೇಶನ್ ಆಗಿ ಸುಧಾರಿಸಿಕೊಂಡಿದ್ದು ಸದ್ಯ ಅವರು ಚುನಾವಣಾ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಹೇಗೆ ಶಸ್ತ್ರಚಿಕಿತ್ಸೆಯಾದ ಎರಡೇ ದಿನಕ್ಕೆ ಆಚೆ ಬರುತ್ತಾರೆ? ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಇದೇ ವೇಳೆ ಅವರು ಮಾತನಾಡುತ್ತ, ಚಲುವರಾಯಸ್ವಾಮಿ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರಲ್ಲ ಆದರೆ ಹೇಗೆ ಕುಮಾರಸ್ವಾಮಿಯವರು ಮೂರೇ ದಿನಕ್ಕೆ ಬಂದಿರುವುದು ನೋಡಿದರೆ ಅನುಮಾನ ಬರುತ್ತದೆ ಅಂಥ ಹೇಳಿದರು. ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಜನರ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೇ ಕೇಳಬೇಡಿ ಅಂತ ಅವರು ಹೇಳಿದರು.