ಶಿವಮೊಗ್ಗ: ಶಿಕ್ಷಕರ ದಿನಾಚರಣೆಯಂದು ನೀಡಲಾಗುವಂತ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಸಾಗರದ ಜೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕ ಸರ್ಫರಾಜ್ ಚಂದ್ರಗುತ್ತಿಗೆ ಸಂದಿತ್ತು. ಇಂತಹ ಅವರ ನಿವಾಸಕ್ಕೆ ತೆರಳಿದಂತ ಕಾಂಗ್ರೆಸ್ ಮುಖಂಡರಾದಂತ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಸೇರಿದಂತೆ ಇತರರು ಸನ್ಮಾನಿಸಿ, ಅಭಿನಂದಿಸಿದರು.
ಸೆಪ್ಟೆಂಬರ್.5ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರವು 2025-26ನೇ ಸಾಲಿನ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿಯನ್ನು ಸಾಗರದ ಜ್ಯೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗುಡ್ಡೆಕೌತಿ ಟೀಚರ್ಸ್ ಕಾಲೋನಿ ನಿವಾಸಿಯಾದ ಸರ್ಫ಼ರಾಜ್ ಚಂದ್ರಗುತ್ತಿಯವರನ್ನು ಆಯ್ಕೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಅವರ ನಿವಾಸಕ್ಕೆ ತೆರಳಿದಂತ ಮಾಜಿ ತಾಲ್ಲೂಕು ಪ೦ಚಾಯ್ತಿ ಸದಸ್ಯರಾದ ಸೋಮಶೇಖರ್ ಲ್ಯಾವಿಗೆರೆ, ನಾಡಕಲಸಿ ಗ್ರಾ.ಪ೦ ಸದಸ್ಯರಾದ ಮಹಾಬಲೇಶ್ ಕೌತಿ, ನಗರ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್.ಡಿ. ಮುಖಂಡರುಗಳಾದ ಗಿರೀಶ್ ಕೋವಿ, ಗುರು ಶಿರವಾಳ, ಹರೀಶ್ ಶಿರವಾಳ ಸದಸ್ಯರು ಗ್ರಾ.ಪ೦. ಭೀಮನೇರಿ, ಶಿಕ್ಷಕರಾದ ಶೇಖರಪ್ಪ, ಜಬಿಉಲ್ಲಾ ಖಾನ್, ಬಸವರಾಜಪ್ಪ, ಗಣೇಶ್, ಮಹೇಂದ್ರ ಹಾಗೂ ಇತರರು ಸನ್ಮಾನಿಸಿ ಅಭಿನಂದಿಸಿದರು.
Watch Video: ಸಾಗರದಲ್ಲಿ ಗಣಪತಿ ಮೆರವಣಿಗೆ ಮೇಲೆ ಉಗುಳಿದ ಬಾಲಕರು, ವಿಡಿಯೋ ವೈರಲ್
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!