ಬೆಳಗಾವಿ: ಕಾಂಗ್ರೆಸ್‌ನಿಂದ ಬಿಜೆಪಿಗೆ ಮರಳುವ ಸಾಧ್ಯತೆಯ ಸುತ್ತಲಿನ ವದಂತಿಗಳನ್ನು ತಳ್ಳಿಹಾಕಿರುವ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಶೆಟ್ಟರ್ ಕಾಂಗ್ರೆಸ್ ತೊರೆದಿರುವುದು ಅನಿರೀಕ್ಷಿತ ಬೆಳವಣಿಗೆ, ನಾನು ಮತ್ತು ಶೆಟ್ಟರ್ ಬೇರೆ ಬೇರೆ ಸಂದರ್ಭಗಳಲ್ಲಿ ಕಾಂಗ್ರೆಸ್ ಸೇರಿದ್ದೆವು, ಅವರು ಬಿಜೆಪಿ ತೊರೆಯುವ ಮನಸ್ಸು ಮಾಡುವ ಮುನ್ನವೇ ನಾನು ಕಾಂಗ್ರೆಸ್ ಸೇರಿದ್ದೆವು, ಇದು ಸುಳ್ಳಲ್ಲ. ಶೆಟ್ಟರ್ ಅವರ ಮಾದರಿಯನ್ನು ಅನುಸರಿಸುತ್ತೇನೆ, ಅಥಣಿಯ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ನಾನು ಅವರಿಗೆ ದ್ರೋಹ ಮಾಡುವುದಿಲ್ಲ.
“ಬಿಜೆಪಿಯಲ್ಲಿನ ಹಲವಾರು ಹಿರಿಯ ನಾಯಕರು ಮತ್ತು ಸ್ನೇಹಿತರು ನನ್ನನ್ನು ಪಕ್ಷಕ್ಕೆ ಮರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಹಲವಾರು ಕ್ಷೇತ್ರಗಳಲ್ಲಿ ನನ್ನ ನಿರ್ಗಮನದ ಪರಿಣಾಮದ ಬಗ್ಗೆ ಬಿಜೆಪಿ ನಾಯಕರಿಗೆ ತಿಳಿದಿದೆ. ಈಗ ಅವರು ನನ್ನನ್ನು ಪಕ್ಷಕ್ಕೆ ಮರಳಲು ಬಯಸುತ್ತಾರೆ, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ.”ಎಂದರು.
ಸವದಿ ಪಕ್ಷಕ್ಕೆ ಮರಳುತ್ತಾರೆ ಎಂಬ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ, ಅಥಣಿ ಶಾಸಕರು, “ಇದು ಅವರ ಅಭಿಪ್ರಾಯವಾಗಿದೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದರು.