ಬೆಂಗಳೂರು: ಬಡವರ ಹೊಟ್ಟೆಯ ಮೇಲೆ ಕಾಂಗ್ರೆಸ್ ಸರ್ಕಾರ ಹೊಡೆದಿದೆ. ಸ್ವಾರ್ಥಕ್ಕಾಗಿ ಕೂಲಿ ಕಾರ್ಮಿಕರ ಭವಿಷ್ಯವನ್ನು ಬಲಿ ಕೊಡುತ್ತಿದೆ ಎಂಬುದಾಗಿ ಜೆಡಿಎಸ್ ತೀವ್ರ ವಾಗ್ಧಾಳಿ ನಡೆಸಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜಾತ್ಯಾತೀತ ಜನತಾ ದಳ ಪಕ್ಷವು, ಗ್ರಾಮೀಣ ಜನರ ಉದ್ಯೋಗಕ್ಕೆ ಗ್ರಹಣ ಹಿಡಿಸಿದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಗೆ ಅಡ್ಡಿ ಪಡಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಜನರ ಉದ್ಯೋಗವನ್ನು ಕಸಿಯುತ್ತಿದೆ ಎಂಬುದಾಗಿ ಗುಡುಗಿದೆ.
ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ಹಣ ಲೂಟಿ ಹೊಡೆಯುತ್ತಿದ್ದ ಕಾಂಗ್ರೆಸ್ಸಿಗರು, ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಕೂಲಿ ಕಾರ್ಮಿಕರ ಉದ್ಯೋಗಕ್ಕೂ ಕುತ್ತು ತಂದು, ಅವರ ಭವಿಷ್ಯಕ್ಕೆ ಕೊಳ್ಳಿ ಹಿಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದೆ.
ಕೇಂದ್ರ ಸರ್ಕಾರದ ಮೇಲಿನ ದ್ವೇಷ ರಾಜಕಾರಣಕ್ಕಾಗಿ ಗ್ರಾಮೀಣ ಭಾಗದ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸಿದ್ಧರಾಮಯ್ಯ ಸರ್ಕಾರದ ನಡೆ ಖಂಡನೀಯ ಅಂತ ಹೇಳಿದೆ.
ಗ್ರಾಮೀಣ ಜನರ ಉದ್ಯೋಗಕ್ಕೆ ಗ್ರಹಣ ಹಿಡಿಸಿದ @INCKarnatakaಸರ್ಕಾರ
ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಗೆ ಅಡ್ಡಿ ಪಡಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಜನರ ಉದ್ಯೋಗವನ್ನು ಕಸಿಯುತ್ತಿದೆ.
ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ಹಣ ಲೂಟಿ ಹೊಡೆಯುತ್ತಿದ್ದ ಕಾಂಗ್ರೆಸ್ಸಿಗರು, ತಮ್ಮ… pic.twitter.com/Ocn9F6g3BS
— Janata Dal Secular (@JanataDal_S) February 24, 2026








