ಹಾವೇರಿ : ಇತ್ತೀಚಿಗೆ ಪ್ರಧಾನಿ ಮೋದಿ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ತಾಳಿ ಕಿತ್ತುಕೊಳ್ಳುವ ಪಕ್ಷವಲ್ಲ ತಾಳಿಭಾಗ್ಯ ಕೊಡುವ ಪಕ್ಷ ಎಂದು ಹಾವೇರಿ ನಗರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ನರೇಂದ್ರ ಮೋದಿ ಅವರು ಹೇಳಿಕೆಗೆ ತಿರುಗೇಟು ನೀಡಿದರು.
ಹಾವೇರಿ ನಗರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ? ಮೋದಿಯಾಗಲಿ ಅಮಿತ್ ಶಾ ಆಗಲಿ ಏಕೆ ಮಾತನಾಡುತ್ತಿಲ್ಲ? ಎಂದು ಹಾವೇರಿ ನಗರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರಶ್ನಿಸಿದರು.
ದೇಶದಲ್ಲಿ ಮೋದಿ ಮಾಡುತ್ತಿರುವ ಭಾಷಣ ಗಂಡಾಂತರಕಾರಿಯಾಗಿದೆ. ಕಾಂಗ್ರೆಸ್ ಬಂದರೆ ಹೆಣ್ಣು ಮಕ್ಕಳ ತಾಳಿ ಸಹ ಬಿಡಲ್ಲ ಅಂತಾರೆ ಕಾಂಗ್ರೆಸ್ ತಾಳಿ ಕಿತ್ತುಕೊಳ್ಳುವ ಪಕ್ಷವಲ್ಲ ತಾಳಿ ಭಾಗ್ಯ ಕೊಡುವ ಪಕ್ಷ. ಗ್ಯಾರಂಟಿಗಳ ಬಗ್ಗೆ ಯಾಕೆ ನೀವು ಇಷ್ಟು ಟೀಕೆ ಮಾಡುತ್ತೀರಿ? ಬಡವರಿಗೆ ಒಳ್ಳೆಯದಾಗುವುದು ನಿಮಗೆ ಬೇಡವಾ? ಎಂದು ಪ್ರಶ್ನಿಸಿದರು.