ಬೆಂಗಳೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಒಂದು ವೇಳೆ ಕಾಂಗ್ರೆಸ್ ಪಕ್ಷ ಸೋತರೆ ಐದು ಗ್ಯಾರಂಟಿ ಯೋಜನೆಗಳು ಮುಂದಿನ ದಿನಗಳಲ್ಲಿ ರದ್ದಾಗಲಿವೆ ಎಂಬ ಶಾಸಕ ಹೇಳಿಕೆಗೆ ಮಾರಿ ಸಚಿವ ಎಂಪಿ ರೇಣುಕಾಚಾರ್ಯ ಕಿಡಿ ಕಾರಿದು ಇವರು ಜನರಿಗೆ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು,ಜನರಿಗೆ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಚುನಾವಣೆ ಪೂರ್ವದಲ್ಲಿ ಐದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದರು. ಇನ್ನು ಬ್ರಹ್ಮಲೋಕದಲ್ಲಿ ತೇಲಾಡುತ್ತಿದ್ದಾರೆ.ಆದರೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿಲ್ಲ. ಶಕ್ತಿ ಯೋಜನೆಯ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳೇ ಇಲ್ಲ. ಶೇಕಡ 80 ರಷ್ಟು ಮಹಿಳೆಯರಿಗೆ ಅನುಕೂಲವಾಗಿಲ್ಲ. ಮಹಾಲಕ್ಷ್ಮಿ ಯೋಜನೆ ಅಡಿಯಲ್ಲಿ ಶೇಕಡ 60ರಷ್ಟು ಮಹಿಳೆಯರಿಗೆ ಇನ್ನೂ ಹಣ ತಲುಪಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಒಂದು ಚುನಾವಣೆ ಸಂದರ್ಭದಲ್ಲಿ ಆಮಿಷಗಳನ್ನು ಒಡ್ಡಲು ಹೊರಟಿದ್ದಾರೆ. ಈ ರಾಜ್ಯದ ಜನ ಬಹಳ ಪ್ರಜ್ಞಾವಂತ ಮತದಾರರಿದ್ದಾರೆ.ದೇಶದಲ್ಲಿ ಮತ್ತೊಮ್ಮೆ ಮಗದೊಮ್ಮೆ ಮೋದಿ ಜನ ಆಯ್ಕೆ ಮಾಡುತ್ತಾರೆ. ಈಗಾಗಲೇ ಕಾಂಗ್ರೆಸ್ INDIA ಒಕ್ಕೂಟ ಚಿದ್ರವಾಗಿದೆ.ಹಾಗಾಗಿ ಜನರಿಗೆ ಹೆದರಿಸಲು ಹೊರಟಿದ್ದಾರೆ. ಈ ರೀತಿ ಹುಚ್ಚು ಹೇಳಿಕೆಯಿಂದ ಸರ್ಕಾರಕ್ಕೆ ಧಕ್ಕೆ ಆಗುತ್ತದೆ, ಇದನ್ನು ಮುಖ್ಯಮಂತ್ರಿ ಅವರು ಶಾಸಕರಿಗೆ ಹೇಳಬೇಕಲ್ವಾ ನೂರಕ್ಕೆ ನೂರು ಭರವಸೆ ಕೊಟ್ಟಿದ್ದು ಎಲ್ಲಿ ಈಡೇರಿಸಿದ್ದಾರೆ? ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾತನಾಡಿದರೆ ಕೇಸ್ ಹಾಕಬಹುದು.ಜನರು ಕೂಡ ಅಂತ ಹೇಳಿಕೆಗಳನ್ನು ಸಹಿಸುವುದಿಲ್ಲ. ಜನರ ವಿರುದ್ಧವಾಗಿ ನಡೆಯುವುದಿಲ್ಲ.ಜನರ ಪರವಾಗಿ ನಡೆದುಕೊಳ್ಳಬೇಕು ದೇಶದಲ್ಲಿ ಮತ್ತೊಮ್ಮೆ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ಜಗತ್ತಲ್ಲಿ ಭಾರತ ದೇಶಕ್ಕೆ ಜಾಗತಿಕ ಮಂಡನೆ ದೊರಕಿದೆ. ಆರ್ಥಿಕದಲ್ಲಿ ಐದನೇ ಸ್ಥಾನದಲ್ಲಿ ಮುಂದೆ ಮೂರನೇ ಸ್ಥಾನಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.ಕಳೆದ 500 ವರ್ಷದ ಹೋರಾಟದ ಪ್ರತಿಫಲವಾಗಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ. ಧಾರ್ಮಿಕವಾಗಿ ನಾವು ಯಾವತ್ತೂ ರಾಜಕಾರಣದಲ್ಲಿ ಎಂದಿಗೂ ಧರ್ಮ ಬೆರಿಸುವುದಿಲ್ಲ ಆದರೆ ಧರ್ಮದ ತಳಹದಿಯಲ್ಲಿ ರಾಜಕಾರಣ ಮಾಡುತ್ತೇವೆ.