ಬೆಂಗಳೂರು: ಕೆ.ಎನ್ ರಾಜಣ್ಣ ರಾಜೀನಾಮೆ ಬಳಿಕ ಹಲವು ಸಚಿವರ ವಜಾಕ್ಕೆ ಕಾಂಗ್ರೆಸ್ ಹೈಕಾಂಡ್ ಮುಂದಾಗಿದೆ ಎನ್ನಲಾಗಿದೆ. ಸದ್ಯ ಕೆ.ಎನ್ ರಾಜಣ್ಣ ರಾಜೀನಾಮೆನ್ನು ಅಸ್ತ್ರವಾಗಿ ಮಾಡಿಕೊಂಡಿರುವ ಹೈಕಮಾಂಡ್ ಮುಂದಿನ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ಆರಕ್ಕು ಹೆಚ್ಚು ಮಂದಿಯ ಸಚಿವರ ರಾಜೀನಾಮೆಯನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸದ್ಯ ಸಿಎಂ ಸಿದ್ರಾಮಯ್ಯ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ ಬಳಿಕ ವಿಧಾನಸಭೆಯಲ್ಲಿರುವ ತಮ್ಮ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಭೆಯಗಳನ್ನು ನಡೆಸುತ್ತಿದ್ದು, ಸದ್ಯ ಮುಂದಿನ ದಿನಗಳ ರಾಜಕೀಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ರಾಜಕೀಯವನ್ನು ಹಲವು ದಿಕ್ಕಿನಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.