ತ್ರಿಪುರಾ : ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತ್ರಿಪುರಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು.
ಧರ್ಮನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಕಮ್ಯುನಿಸ್ಟರು ಮೂರು ದಶಕಗಳ ಕಾಲ ರಾಜ್ಯವನ್ನು ಆಳಿದರು. ಆದರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಕಾಂಗ್ರೆಸ್ ದೇಶದಿಂದ ಹೊರಟು ಹೋದರೆ, ಕಮ್ಯುನಿಸ್ಟರು ಜಗತ್ತನ್ನು ತೊರೆದಿದ್ದಾರೆ ಎಂದೇಳಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದೆ. ಈಶಾನ್ಯ ರಾಜ್ಯದಲ್ಲಿ ಒಟ್ಟಾರೆ ಸಮೃದ್ಧಿಯನ್ನು ತಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಜನರ ಅಪಾರ ಪ್ರೀತಿ ಮತ್ತು ನಂಬಿಕೆಯು ತ್ರಿಪುರಾದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಹೇಳಿದರು.
ಎನ್ಎಲ್ಎಫ್ಟಿ (ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ) ನೊಂದಿಗೆ ಶಾಂತಿ ಮಾತುಕತೆಯ ಮೂಲಕ ನಾವು ಭಯೋತ್ಪಾದನೆಯನ್ನು ಕೊನೆಗೊಳಿಸಿದ್ದೇವೆ. ರಾಜ್ಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಬ್ರೂಸ್ಗಳನ್ನು ಪುನರ್ವಸತಿ ಮಾಡಿದ್ದೇವೆ. ತ್ರಿಪುರಾದ ಸಮಗ್ರ ಅಭಿವೃದ್ಧಿಗಾಗಿ ‘ಜನ್ ವಿಶ್ವಾಸ್ ಯಾತ್ರೆ’ಯನ್ನು ಪ್ರಾರಂಭಿಸಲಾಗಿದೆ ಎಂದೇಳಿದರು.
ಒಂದು ಕಾಲದಲ್ಲಿ ಮಾದಕವಸ್ತು ಕಳ್ಳಸಾಗಣೆ, ಹಿಂಸಾಚಾರ ಮತ್ತು ಬೃಹತ್ ದೇಶವಿರೋಧಿ ಚಟುವಟಿಕೆಗಳಿಗೆ ಹೆಸರಾಗಿದ್ದ ತ್ರಿಪುರಾ, ಈಗ ಅಭಿವೃದ್ಧಿ, ಅತ್ಯುತ್ತಮ ಮೂಲಸೌಕರ್ಯ, ಕ್ರೀಡೆಗಳಲ್ಲಿನ ಸಾಧನೆಗಳು, ಹೆಚ್ಚುತ್ತಿರುವ ಹೂಡಿಕೆಗಳು ಮತ್ತು ಸಾವಯವ ಕೃಷಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಎಂದೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯಲು ಎರಡು ಬಿಜೆಪಿ ರಥಯಾತ್ರೆಗಳನ್ನು ಪ್ರಾರಂಭಿಸಲು ಗೃಹ ಸಚಿವರು ತ್ರಿಪುರಾದಲ್ಲಿದ್ದಾರೆ.
ತ್ರಿಪುರಾ ವಿಧಾನಸಭೆಯ ಎಲ್ಲಾ 60 ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 2023 ರೊಳಗೆ ತ್ರಿಪುರ ವಿಧಾನಸಭೆ ಚುನಾವಣೆ ನಡೆಯಲಿದೆ.
ತ್ರಿಪುರಾ ಬಿಜೆಪಿ ರಾಜ್ಯದಲ್ಲಿ ಪಕ್ಷದ ಬೆಂಬಲವನ್ನು ಹೆಚ್ಚಿಸುವ ಸಲುವಾಗಿ ‘ಜನ್ ವಿಶ್ವಾಸ ಯಾತ್ರೆ’ ಅಭಿಯಾನವನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಯಾತ್ರೆಯ ಅಂತಿಮ ದಿನವಾದ ಜನವರಿ 12 ರಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಮನಗರ: ಸ್ನಾತಕೋತ್ತರ ಕೇಂದ್ರದ ಸ್ಥಳ ಪರಿಶೀಲನೆ ನಡೆಸಿದ ಸಚಿವ ಅಶ್ವತ್ಥನಾರಾಯಣ
ಒಂದಕ್ಕಿಂತ ಹೆಚ್ಚು ‘ಬ್ಯಾಂಕ್ ಖಾತೆ’ ಹೊಂದಿದ್ದೀರಾ.? ಮೊದ್ಲು ಈ ‘ವಿಷ್ಯ’ ತಿಳಿಯಿರಿ, ಇಲ್ಲದಿದ್ರೆ ನಿಮ್ಗೆ ನಷ್ಟ