ಬೆಂಗಳೂರು: ಶಾಸಕರಲ್ಲಿ ಅಭಿವೃದ್ಧಿ ವಿಚಾರವಾಗಿ ಅಸಮಾಧಾನ ಇರೋದು ನಿಜ. ಆದ್ರೇ ಅದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅನ್ನೋದು ಸುಳ್ಳಿ. 4 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ. ಬೀಳೋ, ಬೀಳಿಸೋ ಮಾತೇ ಇಲ್ಲ ಎಂಬುದಾಗಿ ಪಿ ಡಬ್ಲ್ಯೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಖ್ಯಮಂತ್ರಿ ಕುರಿತಾಗಿ ನಮ್ಮ ನಮ್ಮಲ್ಲೇ ಜಗಳ ಇದೆ. ಅದು ಪಾರ್ಟಿಯಲ್ಲಿ ಇದೆ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಕೆ ಮಾಡುವುದು ಬೇಡ. ಏಕನಾಥ ಶಿಂಧೆಗೆ ಮಾತನಾಡುವ ಸ್ವಾತಂತ್ರ್ಯವಿದೆ. ಮಾತನಾಡುತ್ತಾರೆ ಎಂಬುದಾಗಿ ತಿಳಿಸಿದರು.
ಭಿನ್ನಮತ ಇದೆ ಅಂತ ಸರ್ಕಾರ ಬೀಳಿಸೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದಂತ ಅವರು, ಶಾಸಕರ ಅಸಮಾಧಾನ ಇದೆ. ಅದಕ್ಕಾಗಿ ಸರ್ಕಾರ ಬೀಳುವುದಿಲ್ಲ. ಅಭಿವೃದ್ಧಿ, ವರ್ಗಾವಣೆ ಬಗ್ಗೆ ಸಮಸ್ಯೆ ಇದೆ. ಅದಕ್ಕೆ ಸರ್ಕಾರ ಬೀಳಲ್ಲ. ಅದು ಎಲ್ಲಾ ಸರ್ಕಾರದಲ್ಲೂ ಇದ್ದೇ ಇರೋದು. ಯಾವುದೇ ಕಾರಣಕ್ಕೂ 4 ವರ್ಷ ಕಾಂಗ್ರೆಸ್ ಸರ್ಕಾರ ಬೀಳುವುದಿಲ್ಲ. ಬೀಳಿಸೋದಕ್ಕೆ ಪ್ರಯತ್ನ ಪಟ್ರೆ ಅದು ಸಾಧ್ಯನೂ ಆಗಲ್ಲ ಅಂತ ಹೇಳಿದರು.
ಕರ್ನಾಟಕದಲ್ಲಿ ‘ಆಪರೇಶನ್ ನಾಥ’ ಸಾಧ್ಯವಿಲ್ಲ, ನಮ್ಮ ಶಾಸಕರು ಮಾರಾಟಕ್ಕಿಲ್ಲ: ಸಿಎಂ ಸಿದ್ಧರಾಮಯ್ಯ
ಅಶ್ಲೀಲ ವಿಡಿಯೋ ಕೇಸ್ : ಪ್ರಜ್ವಲ್ ರೇವಣ್ಣಗೆ ‘ರೆಡ್ ಕಾರ್ನರ್’ ನೋಟಿಸ್ ನೀಡಲು ‘SIT’ ಪ್ಲ್ಯಾನ್