ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40% ಕಮೀಷನ್ ದಂಧೆ ನಡೆಯುತ್ತಿದೆ ಎಂಬುದಾಗಿ ಕಿಡಿಕಾರಿದ್ವಿ. ಈಗ ನಮ್ಮದೇ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಕಮೀಷನ್ ದಂಧೆ ನಡೆಯುತ್ತಿದೆ. ಇದನ್ನ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರೇ ಹೇಳಿದ್ದೇನೆ ಎಂಬುದಾಗಿ ಸ್ವ ಪಕ್ಷದ ವಿರುದ್ಧವೇ ಕಾಂಗ್ರೆಸ್ ಶಾಸಕ ಶಿವರಾಂ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇದನ್ನು ಅವತ್ತು ನಾನು ಮುಖ್ಯಮಂತ್ರಿ ಎದುರಿಗೆ ನೇರವಾಗಿ ಹೇಳಿದೆ. ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರ್ತಾ ಇದೆ. ಸರಿಯಾಗಿ ಬುದ್ಧಿ ಹೇಳಿ ಅಂತ ನೇರವಾಗೇ ಹೇಳಿದೆ. ನಾನೊಬ್ಬನೇ ಅಲ್ಲ ಎಲ್ಲರೂ ಹೇಳಿದ್ವಿ ಎಂದರು.
ಪಕ್ಷ ಉಳಿಯಬೇಕಾದ್ರೇ ಇವುಗಳನ್ನೆಲ್ಲ ಕಾಪಾಡಿಕೊಳ್ಳಬೇಕು. ನಾನು ನೇರವಾಗಿ ಹೇಳಿದ್ದಕ್ಕೆ ನಿಷ್ಟೂರವಾದಿ. ಇಷ್ಟು ಆಕ್ರೋಶ ಆಗೋದಕ್ಕೆ ಇದೇ ಕಾರಣ. ನಾನು ಶೇ.40ರಷ್ಟು ಬಿಜೆಪಿ ಅವಧಿಯಲ್ಲಿ ಕಮೀಷನ್, ಭ್ರಷ್ಟಾಚಾರ ದಂಧೆ ನಡೆಯುತ್ತಿತ್ತು. ಈಗ ಅದಕ್ಕಿಂತ ಹೆಚ್ಚು ಎಂದು ಹೇಳುತ್ತಿದ್ದೇನೆ ಎಂಬುದಾಗಿ ಆಕ್ರೋಶವನ್ನು ಹೊರ ಹಾಕಿದರು.
ಎಕ್ಸ್ ಮಾಡಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಿಡಿ
ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ 40% ಕಮಿಷನ್ ಆರೋಪ ಕೇವಲ ಅಪಪ್ರಚಾರ ಎಂದು ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಬಿ.ಶಿವರಾಂ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃಧ್ಧಿ ಶೂನ್ಯವಾದರೂ ವರ್ಗಾವಣೆ ದಂಧೆ ಮಾತ್ರ ಜೋರು ಅಂತಲೂ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಸುಳ್ಳು, ಅಪಪ್ರಚಾರ, ಪೊಳ್ಳು ಭರವಸೆಗಳನ್ನು ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನ ಅವರ ಸುಳ್ಳು, ಅಪಪ್ರಚಾರಗಳೇ ಆಪೋಶನ ತೆಗೆದುಕೊಳ್ಳುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ 40% ಕಮಿಷನ್ ಆರೋಪ ಕೇವಲ ಅಪಪ್ರಚಾರ ಎಂದು ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಬಿ.ಶಿವರಾಂ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃಧ್ಧಿ ಶೂನ್ಯವಾದರೂ ವರ್ಗಾವಣೆ ದಂಧೆ ಮಾತ್ರ ಜೋರು ಅಂತಲೂ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
ಸುಳ್ಳು, ಅಪಪ್ರಚಾರ, ಪೊಳ್ಳು ಭರವಸೆಗಳನ್ನು ಮೂಲಕ… pic.twitter.com/9kOB9yoU56
— R. Ashoka (ಆರ್. ಅಶೋಕ) (@RAshokaBJP) February 2, 2024