ಕೋಲಾರ: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಅಂತ ಮಾಜಿ ಪ್ರಧಾನಿ ಹೆಚ್ . ಡಿ ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ.
ಅವರು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಮತಯಾಚನೆ ನಡೆಸಿದರು. ಇದೇ ವೇಳೆ ಅವರು ಮಾತನಾಡುತ್ತ, ನನ್ನ ರಾಜಕೀಯ ಅನುಭವದಿಂದ ಹೇಳುತ್ತಿದ್ದು, 2024ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಹೇಳಿದರು. ಇನ್ನೂ ಇವತ್ತು ಕಾಂಗ್ರೆಸ್ ಐದು ಗ್ಯಾರಂಟಿ ತೋರಿಸಿ ಚುನಾವಣೆಗೆ ಬಂದಿದೆ. ಆದರೆ ಎನ್ಡಿಎ ಇಪ್ಪತ್ತೈದು ಗ್ಯಾರಂಟಿ ಕೊಟ್ಟಿದೆ. ಕುಮಾರಸ್ವಾಮಿ ರೈತರಿಗಾಗಿ 25 ಸಾವಿರ ಕೋಟಿ ಸಾಲ ಮನ್ನಾ ಕೊಟ್ಟಿರೋದು ಕಾಣ್ತಿಲ್ವ? ಬೆಂಗಳೂರಲ್ಲಿ ನೀರಿಗೆ ಅಭಾವ ಎದುರಾಗಿದೆ. ಇದನ್ನು ನಿಭಾಯಿಸೋಕೆ ಮಹಾನುಭಾವರಿಗೆ ಆಗ್ತಿಲ್ಲ. ಬಿಡಿಎ, ವಾಟರ್ಸ್ ಸಪ್ಲೆ, ಪ್ಲಾನಿಂಗ್ ಅಥಾರಿಟಿ ಏನು ಮಾಡ್ತಿದೆ? ಅಂಥ ಕಾಂಗ್ರೆಸ್ ವಿರುದ್ದ ಹರಿಹಾಯ್ದರು.