ಬೆಂಗಳೂರು : ಲೋಕಸಭೆ ಚುನಾವಣೆ ನಿಖರ ಫಲಿತಾಂಶ ಜೂನ್ 4ರಂದು ಹೊರ ಬೀಳಲಿದೆ. ಅದಕ್ಕೂ ಮುಂಚೆ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ ಈ ಬಾರಿ ಮತ್ತೆ ಎನ್ ಡಿ ಎ ಬಹುಮತ ಪಡೆದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ ಎಂಬ ಸಮೀಕ್ಷೆಯನ್ನು ಬಹಿರಂಗ ಮಾಡಿದೆ.
ಇನ್ನೂ ಈ ಕುರಿತು ಬಿಜೆಪಿಯ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ಪ್ರತಿಕ್ರಿಯ ನೀಡಿದ್ದು ಕಾಂಗ್ರೆಸ್ ಎಕ್ಸಿಟ್ ಪೋಲ್ ನಂಬುತ್ತಿಲ್ಲ ಅವರು ನಮಗೆ ಬಹುಮತ ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ ಡಿ ಎ ಗೆ ಜನರು ಬಹುಮತ ನೀಡಲಿದ್ದಾರೆ. 360 ರಿಂದ 400 ಸೀಟ್ ಬರುತ್ತೆ ಅಂತ ಎಕ್ಸಿಟ್ ಪೋಲ್ ಹೇಳಿದೆ. ಕರ್ನಾಟಕ ಸೇರಿ ಬೇರೆ ರಾಜ್ಯದಲ್ಲೂ ಕೂಡ ಹೆಚ್ಚು ಸೀಟು ಬರುತ್ತವೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಯಾವುದೇ ಅಡೆತಡೆ ಇಲ್ಲದ ಫಲಿತಾಂಶವನ್ನು ಜನರು ನೀಡಿದ್ದಾರೆ ಎಂದರು.
ಅಧಿಕೃತ ಫಲಿತಾಂಶ ಜೂನ್ 4 ರಂದು ಬರಲಿದೆ. ಕಾಂಗ್ರೆಸ್ ನಾಯಕರು ಮಾತ್ರ ಮತದಾನೋತ್ತರ ಸಮೀಕ್ಷೆಯನ್ನು ನಂಬುತ್ತಿಲ್ಲ.ಇನ್ನೂ ತಮಗೆ ಬಹುಮತ ಬರುತ್ತೆ ಅನ್ನೋ ನಂಬಿಕೆಯಲ್ಲಿ ಇದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಎನ್ನ ರವಿಕುಮಾರ್ ವಾಗ್ದಾಳಿ ನಡೆಸಿದರು.