ಬೆಂಗಳೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ಜಯನಗರ ಅಸೆಂಬ್ಲಿಯಲ್ಲಿ ಕೋಟ್ಯಾಂತರ ರೂಪಾಯಿ ದಾಖಲೆಯಿಲ್ಲದ ಹಣವನ್ನು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಏ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸೀಜ್ ಮಾಡಿದ ಕೋಟ್ಯಾಂತರ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಅವರು ಹಣ ಮತ್ತು ತೋಳ್ಬಲದ ಮೂಲಕ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಸಂಸದ ತೇಜಸ್ವೀ ಸೂರ್ಯ ಹೇಳಿದರು.
ಬೆಳಗ್ಗೆ ನಮಗೆ ಇಬ್ಬರು ಫೋನ್ ಮಾಡಿ ಕಾಂಗ್ರೆಸ್ಸಿನವರು ಕೆಂಪು ಬಣ್ಣದ ವೋಕ್ಸವ್ಯಾಗನ್ ಕಾರಿನಲ್ಲಿ ಮತ್ತು ಬಿಳಿ ಬಣ್ಣದ ಇನ್ನೂ ನೊಂದಾಣಿಯಾಗದ ಬೆನ್ಜ್ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ದುಡ್ಡನ್ನು ಸಾಗಿಸುತ್ತಿದ್ದಾರೆ ಎಂದು ಯಾರಿಂದ ಬಲವಂತವಾಗಿ ಕಾಂಗ್ರೆಸ್ಸಿನವರು ದುಡ್ಡು ತೆಗೆದುಕೊಂಡಿದ್ದಾರೋ ಅವರು ಕಚೇರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದರು.
ಕಾಂಗ್ರೆಸ್ಸಿನವರಿಗೆ ಚುನಾವಣೆ ಸೋಲುತ್ತೇವೆ ಎನ್ನುವುದು ನೂರಕ್ಕೆ ನೂರು ಗ್ಯಾರಂಟಿ ಆಗುತ್ತಿದ್ದಂತೆಯೇ ಹಣದ ದರ್ಪ ತೋರಿಸಲು ಆರಂಭಿಸಿದ್ದಾರೆ. ಹಣವನ್ನು ರಸ್ತೆರಸ್ತೆಯಲ್ಲಿ ಹಂಚಿ, ದುಡ್ಡಿನ ಮೂಲಕ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.ಹಣ, ತೋಳ್ಬಲದ ಆಧಾರದಲ್ಲಿ ಚುನಾವಣೆ ಗೆಲ್ಲಬಹುದು ಎಂಬ ಅಹಂಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜಯನಗರದಲ್ಲಿ ಇಂದು ವಶಪಡಿಸಿಕೊಂಡಿರುವ ಕೋಟಿ, ಕೋಟಿ ರೂಪಾಯಿಗಳು, ಕಾಂಗ್ರೆಸ್ ಗೆ ಸೋಲಿನ ಅರಿವಾಗಿರುವುದರ ಸ್ಪಷ್ಟ ಸಂಕೇತ.
ದುಡ್ಡು ವಶಪಡಿಸಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತಿರುವ ಕಾಂಗ್ರೆಸ್ ನಾಯಕರು, ಮರೆಗೆ ತೆರಳಿ ತಮ್ಮ ಪೊಲಿಟಿಕಲ್ ಬಾಸ್ ಗಳ ಜೊತೆ ಸಂಭಾಷಣೆಯಲ್ಲಿ ನಿರತವಾಗಿರುವುದನ್ನು ಮಾಧ್ಯಮಗಳೇ ಸೆರೆ ಹಿಡಿದಿವೆ.ಸಾರ್ವಜನಿಕರು ಅಭಿವೃದ್ಧಿಯ ರಾಜಕಾರಣಕ್ಕೆ , ದೇಶದ ಹಿತಾಸಕ್ತಿ ಕಾಯುವ ಬಿಜೆಪಿಗೆ ಬೆಂಬಲ ನೀಡುತ್ತಾರೆಯೇ ವಿನಃ, ಕಾಂಗ್ರೆಸ್ ನ ಹತಾಶೆಯ, ಕೊನೆಯ ಹಂತದ ದುಡ್ಡಿನ ರಾಜಕಾರಣಕ್ಕೆ ಅಲ್ಲ ಎಂಬುದು ಸ್ಪಷ್ಟ.
ಹಣ, ತೋಳ್ಬಲದ ಆಧಾರದಲ್ಲಿ ಚುನಾವಣೆ ಗೆಲ್ಲಬಹುದು ಎಂಬ ಅಹಂಕಾರದಲ್ಲಿರುವ @INCIndia ಪಕ್ಷಕ್ಕೆ ಬೆಂಗಳೂರು ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
ಜಯನಗರದಲ್ಲಿ ಇಂದು ವಶಪಡಿಸಿಕೊಂಡಿರುವ ಕೋಟಿ, ಕೋಟಿ ರೂಪಾಯಿಗಳು, ಕಾಂಗ್ರೆಸ್ ಗೆ ಸೋಲಿನ ಅರಿವಾಗಿರುವುದರ ಸ್ಪಷ್ಟ ಸಂಕೇತ.
ದುಡ್ಡು ವಶಪಡಿಸಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತಿರುವ… pic.twitter.com/wdj9QfItjl
— Tejasvi Surya (ಮೋದಿಯ ಪರಿವಾರ) (@Tejasvi_Surya) April 13, 2024