ಆಂಧ್ರಪ್ರದೇಶ : ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು.ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಶರ್ಮಿಳಾ ಅವರನ್ನು ಬಂಧಿಸುವ ಸಾಧ್ಯತೆ ಇದ್ದಿದ್ದರಿಂದ ಅವರು ರಾತ್ರಿ ಪಕ್ಷದ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು. ಹೌದು ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈ.ಎಸ್ ಶರ್ಮಿಳಾ ರೆಡ್ಡಿ ಅವರು ಗೃಹಬಂಧನದಿಂದ ತಪ್ಪಿಸಿಕೊಳ್ಳಲು ಬುಧವಾರ ರಾತ್ರಿ ವಿಜಯ ವಾಡದಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿಯೇ ಮಲಗಿ ಕಾಲಕಳೆದಿದ್ದಾರೆ.
‘ಸರ್ಕಾರಿ ಮಹಿಳಾ ನೌಕರ’ರಿಗೆ ಗುಡ್ ನ್ಯೂಸ್: ಫೆ.23ರಂದು ‘ಅರ್ಧದಿನ ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾವು ನಿರುದ್ಯೋಗಿಗಳ ಪರವಾಗಿ ಪ್ರತಿಭಟನೆಗೆ ಕರೆ ನೀಡಿದರೆ, ನೀವು ನಮ್ಮನ್ನು ಗೃಹಬಂಧನದಲ್ಲಿ ಇರಿಸಲು ಪ್ರಯತ್ನಿಸುತ್ತೀರಾ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ? ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ಮಹಿಳೆಯಾಗಿ ನಾನು ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತು ಗೃಹಬಂಧನವನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾತ್ರಿ ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Yuavanidhi Scheme : ‘ಯುವನಿಧಿ’ ಯೋಜನೆಗೆ ಅರ್ಜಿ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ!
BREAKING:ಫೆಮಾ ಉಲ್ಲಂಘನೆ : ‘ಬೈಜು ರವೀಂದ್ರನ್’ ವಿರುದ್ಧ ಇಡಿ ‘ಲುಕ್ ಔಟ್ ಸುತ್ತೋಲೆ’
ಈ ಬಗ್ಗೆ ಶರ್ಮಿಳಾ ಅವರು ವಿಜಯವಾಡದ ಆಂಧ್ರರತ್ನ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಳೆದ ಐದು ವರ್ಷಗಳಲ್ಲಿ ಯುವಜನರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
నిరుద్యోగుల పక్షాన పోరాటానికి పిలుపునిస్తే హౌజ్ అరెస్ట్ లు చేయాలని చూస్తారా ? వేలాదిగా తరలి వస్తున్న పార్టీ శ్రేణులను ఎందుకు ఆపుతున్నారు ? ప్రజాస్వామ్యంలో నిరసన తెలిపే హక్కు మాకు లేదా ? నేను ఒక మహిళనై ఉండి హౌజ్ అరెస్ట్ కాకుండా ఉండేందుకు,పోలీసులను తప్పించుకొని కాంగ్రెస్ పార్టీ…
— YS Sharmila (@realyssharmila) February 21, 2024