ನವದೆಹಲಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಭೀಕರ ದಾಳಿಗೆ 26 ಜನ ಅಮಾಯಕರು ಬಲಿಯಾಗಿದ್ದಾರೆ. 26 ಜನರು ಬಲಿಯಾಗಿದ್ದಕ್ಕೆ ಇಡೀ ದೇಶವೆ ಉಗ್ರರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಜನ ದುಃಖದಲ್ಲಿದ್ದಾರೆ. ಆದರೆ ರಾಷ್ಟೀಯ ಪಕ್ಷಗಳು ಎನಿಸಿಕೊಂಡಿರುವ ಬಿಜೆಪಿ ಹಾಗು ಕಾಂಗ್ರೆಸ್ ಮಾತ್ರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ.
ಹೌದು ಪಹಲ್ಗಾಮ್ ದಾಳಿ ಬಗ್ಗೆ ರಾಜಕೀಯಕ್ಕೆ ಕೆಸರೆರಚಾಟ ನಡೆಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟ್ವೀಟ್ ವಾರ್ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಲೆ ಇಲ್ಲದ ಫೋಟೋವನ್ನು ಕಾಂಗ್ರೆಸ್ ಬಿಟ್ಟಿದೆ. ಹೊಣೆ ಹೊರುವ ಸಂದರ್ಭದಲ್ಲಿ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದಲೂ ಉತ್ತರ ನೀಡಿದ್ದು ಕಾಂಗ್ರೆಸ್ ನಾಯಕರು ಫೋಟೋ ಇರುವ ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ ಪಾಕಿಸ್ತಾನ ಏಜೆಂಟ್ ಗಳೆಂಬ ಫೋಟೋವನ್ನು ಬಿಜೆಪಿ ರಿಲೀಸ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಫೋಟೋಗಳು ಇವೆ ಕಾಂಗ್ರೆಸ್ ಕಾ ಹಾತ್ ಪಾಕ್ ಕೆ ಸಾತ್ ಎಂದು ಟ್ವೀಟ್ ಮಾಡಲಾಗಿದೆ.ಜನರು ಎರಡು ಪಕ್ಷಗಳಗೆ ಉಗಿಯುತ್ತಿದ್ದಾರೆ.
'जिम्मेदारी' के समय – Gayab pic.twitter.com/gXFublGkGn
— Congress (@INCIndia) April 28, 2025
कांग्रेस का हाथ, पाकिस्तान के साथ 🤝 pic.twitter.com/8BBDkiZqDe
— BJP (@BJP4India) April 28, 2025