ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆಗೆ ಸೋನಿಯಾ ಗಾಂಧಿ ಆಗಮಿಸಿದ್ದು, ಮಂಡ್ಯ ಜಿಲ್ಲೆಯ ನ್ಯಾಮನಹಳ್ಳಿ ಬಳಿ ಸೋನಿಯಾಗಾಂಧಿ ಪಾದಯಾತ್ರೆ ಸೇರಿಕೊಂಡಿದ್ದಾರೆ.ಈ ವೇಳೆ ಸೋನಿಯಾ ಗಾಂಧಿ 12 ನಿಮಿಷ ನಡೆದು ಕಾರು ಏರಿದ್ದಾರೆ.
BIGG BREAKING NEWS : ಕಾಂಗ್ರೆಸ್ ನ `ಭಾರತ್ ಜೋಡೋ ಪಾದಯಾತ್ರೆ’ಗೆ ಸೋನಿಯಾ ಗಾಂಧಿ ಎಂಟ್ರಿ
ತಾಯಿಯನ್ನು ಕಾರಿಗೆ ರಾಹುಲ್ ಗಾಂಧಿ ಹತ್ತಿಸಿದ್ದಾರೆ. ಸದ್ಯ ಕಾರಿನಲ್ಲಿ ಕುಳಿತು ಸೋನಿಯಾ ಗಾಂಧಿ ಬರುತ್ತಿದ್ದಾರೆ
ಇನ್ನು ರಾಹುಲ್ ಗಾಂಧಿ ಜೊತೆ ವಿಶೇಷ ಚೇತನರು ಹೆಜ್ಜೆ ಹಾಕಿದ್ದಾರೆ. 5 ಜನ ವಿಶೇಷ ಚೇತನರ ಜೊತೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ.
BIGG BREAKING NEWS : ಕಾಂಗ್ರೆಸ್ ನ `ಭಾರತ್ ಜೋಡೋ ಪಾದಯಾತ್ರೆ’ಗೆ ಸೋನಿಯಾ ಗಾಂಧಿ ಎಂಟ್ರಿ
ಅಂದಹಾಗೆ ಬೆಳಗ್ಗೆ ಪಾಂಡವಪರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಮತ್ತೆ ಪೇ ಸಿಎಂ ಪ್ರದರ್ಶನ ಮಾಡಲಾಗಿದೆ. ನ್ಯಾಮನಹಳ್ಳಿಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಸೋನಿಯಾಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಸಾಥ್ ನೀಡಿದ್ದಾರೆ. ಹೀಗಾಗಿ ಬಿಗ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.