ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಮಧ್ಯಾಹ್ನದ ಭೋಜನದ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೇ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ 40 ಕಮೀಷನ್ ಆರೋಪಿಸಿ, ಕಾಂಗ್ರೆಸ್ ನಿಂದ ಘೋಷಣೆ ಕೂಗಲಾಯಿತು. ಹೀಗಾಗಿ ಸಭಾಧ್ಯಕ್ಷರು ಕೆಲ ಕಾಲ ಪರಿಷತ್ ಕಲಾಪ ಮುಂದೂಡಿಕೆ ಮಾಡಿದ್ರು. ಆ ಬಳಿಕ ಆರಂಭವಾದಂತ ಕಲಾಪದಲ್ಲಿಯೂ ಕಾಂಗ್ರೆಸ್ ಗದ್ದಲ ಮುಂದುವರೆಸಿದ ಕಾರಣ, ಸದನದ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ.
ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭಗೊಂಡಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ವಾಕ್ ಸಮರ, ಜಟಾಪಟಿ ಸದನದಲ್ಲಿ ಮುಂದುವರೆದಿದೆ. ವಿವಿಧ ವಿಷಯಗಳ ಮೇಲೆ ಬಿಸಿ ಬಿಸಿ ಚರ್ಚೆಗಳು ನಡೆಯೋದರ ಜತೆಗೆ, ಬೆಂಗಳೂರಿನ ಮಳೆ ಅವಾಂತರದ ಬಗ್ಗೆ, ಒತ್ತುವರಿ ಕಾರ್ಯಾಚರಣೆ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಇಂದು ವಿಧಾನಸಭೆಯಲ್ಲಿ ಅಂಗೀಕಾರವಾಗಿರುವಂತ ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಪರಿಷತ್ ನಲ್ಲಿಯೂ ಮಂಡಿಸೋದಕ್ಕೆ ಬಿಜೆಪಿ ಮುಂದಾಗಿತ್ತು. ಸದನ ಸಮಿತಿಯ ಸಭೆಯ ಬಳಿಕ ಸೂಕ್ತ ಸಮಯದಲ್ಲಿ ಬಿಜೆಪಿ ಪಕ್ಷದಿಂದ ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸೋ ಪ್ಲಾನ್ ಮಾಡಲಾಗಿತ್ತು. ಆದ್ರೇ ಕಾಂಗ್ರೆಸ್ ತೀವ್ರ ವಿರೋಧದ ನಡುವೆ ಇಂದು ಸಾಧ್ಯವಾಗಲಿಲ್ಲ.
ಮಧ್ಯಾಹ್ನದ ಭೋಜನ ವಿರಾಮದ ನಂತ್ರ ಆರಂಭಗೊಂಡಂತ ಪರಿಷತ್ ಕಲಾಪದಲ್ಲಿ ಬಿಜೆಪಿಯ ಶೇ.40ರ ಕಮೀಷನ್ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ ಗದ್ದಲ, ಕೋಲಾಹಲ ಉಂಟಾದ ಕಾರಣ, ಕೆಲ ಹೊತ್ತು ಸದನ ಮುಂಡೂಡಲಾಯಿತು. ಆದ್ರೇ ಈ ಬಳಿಕವೂ ಆರಂಭಗೊಂಡ ಸದನದ ವೇಳೆಯಲ್ಲಿ ಮತ್ತೆ ಕಾಂಗ್ರೆಸ್ ನಿಂದ ಘೋಷಣೆ ಕೂಗಿದ್ದರ ಕಾರಣ, ಪರಿಷತ್ ಕಲಾಪವನ್ನು ನಾಳೆ ಬೆಳಿಗ್ಗೆಗೆ ಮುಂದೂಡಲಾಗಿದೆ.
ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ – ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಎಚ್ಚರಿಕೆ