ದೇವನಹಳ್ಳಿ: ಹವಾಮಾನ ಬದಲಾವಣೆ ಜತೆಗೆ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ ಮಸ್ ಹಬ್ಬ, ಹೊಸ ವರ್ಷದಾಚರಣೆಯ ಸಂಭ್ರಮ ಹಿನ್ನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ. ಏರ್ಪೋರ್ಟ್ನ 10 ಗೇಟ್ಗಳಲ್ಲೂ ಜನರ ದೊಡ್ಡ ಸರದಿ ಸಾಲುಗಳು ನಿರ್ಮಾಣವಾಗುತ್ತಿವೆ.
SHOCKING NEWS: ರೈತನ ತಲೆ ಕತ್ತರಿಸಿದ ಮಾನಸಿಕ ಅಸ್ವಸ್ಥ, ಹೊಲದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಘಟನೆ
ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಪ್ರಯಾಣಿಕರು ಬಸ್ ಮತ್ತು ರೈಲು ಪ್ರಯಾಣ ಬಿಟ್ಟು ವಿಮಾನಯಾನದತ್ತ ಒಲವು ತೋರಿಸುತ್ತಿದ್ದಾರೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆಯೇ ಥೇಟ್ ಮೆಜೆಸ್ಟಿಕ್ನಂತೆ ಪ್ರಯಾಣಿಕರು ತುಂಬಿ ತುಳುಕುತ್ತಿರುವ ದೃಶ್ಯ ಕಂಡು ಬಂದಿದೆ.
SHOCKING NEWS: ರೈತನ ತಲೆ ಕತ್ತರಿಸಿದ ಮಾನಸಿಕ ಅಸ್ವಸ್ಥ, ಹೊಲದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಘಟನೆ
ಪ್ರತಿ ವರ್ಷ ಡಿಸೆಂಬರ್ ತಿಂಗಳು ಬೆಂಗಳೂರು ಮಂಜಿನಲ್ಲಿ ಮುಳುಗಿ ಹೋಗುತ್ತಿತ್ತು. ಆದರೆ ಈ ಬಾರಿಯ ಡಿಸೆಂಬರ್ ತಿಂಗಳು ಮಂಜು ಜೊತೆ ಮಳೆಯು ಸೇರಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮಲೆನಾಡಿನಂತೆ ಭಾಸವಾಗುತ್ತಿದೆ.