ನವದೆಹಲಿ: ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಇನ್ಫೋಸಿಸ್ ಸಂಸ್ಥಾಪಕ, NR ನಾರಾಯಣ ಮೂರ್ತಿ(Narayana Murthy) ಅವರು ಯುನೈಟೆಡ್ ಕಿಂಗ್ಡಮ್ನ ಹೊಸ ಪ್ರಧಾನ ಮಂತ್ರಿಯಾಗುತ್ತಿರುವ ತಮ್ಮ ಅಳಿಯ ರಿಷಿ ಸುನಕ್(Rishi Sunak) ಅವರನ್ನು ಅಭಿನಂದಿಸಿದ್ದಾರೆ.
ʻಷಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ನಾವು ಬಯಸುತ್ತೇವೆ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ದೇಶದ ಮೊದಲ ಪ್ರಧಾನಿಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ರಿಷಿ ಸುನಕ್ ಅವರು ಬ್ರಿಟನ್ ಜನರಿಗೆ ತಮ್ಮ ಕೈಲಾದದ್ದನ್ನು ಮಾಡುತ್ತಾರೆʼ ಎಂದು ನಾರಾಯಣ ಮೂರ್ತಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸ್ಟ್ಯಾನ್ಫೋರ್ಡ್ ಮತ್ತು ಆಕ್ಸ್ಫರ್ಡ್ ಹಳೆಯ ವಿದ್ಯಾರ್ಥಿಯಾಗಿರುವ ರಿಷಿ ಸುನಕ್ ಅವರು ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.
WATCH VIDEO: ಛತ್ತೀಸ್ಗಢ ಸಿಎಂ ʻಭೂಪೇಶ್ ಬಘೇಲ್ʼಗೆ ಬಿತ್ತು ಚಾಟಿಯೇಟು… ಯಾಕೆ ಗೊತ್ತಾ?