ನವದೆಹಲಿ: ಸ್ವಿಗ್ಗಿ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕಳೆದ ವರ್ಷದಲ್ಲಿ ಇನ್ಸ್ಟಾಮಾರ್ಟ್ ಮೇಲಿನ ಆರ್ಡರ್ಗಳು 16 ಪಟ್ಟು ಹೆಚ್ಚಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿ ವಾಸಿಸುವ ಜನರು ಇನ್ಸ್ಟಾಮಾರ್ಟ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈನಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳು, ಮುಟ್ಟಿನ ಕಪ್ಗಳು ಮತ್ತು ಟ್ಯಾಂಪೂನ್ಗಳು (2021 ರಲ್ಲಿ ಆರ್ಡರ್ ಮಾಡಲಾದ ಸುಮಾರು 2 ಮಿಲಿಯನ್ ಯುನಿಟ್ಗಳು) ಮತ್ತು ಬ್ಯಾಂಡ್-ಏಡ್ಗಳು (ಕಳೆದ ವರ್ಷದಲ್ಲಿ ಸುಮಾರು 45,000 ಬಾಕ್ಸ್ ಆರ್ಡರ್) ನಂತಹ ಆರ್ಡರ್ಗಳನ್ನು ಕಂಡಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಸ್ವಿಗ್ಗಿ ಸಮೀಕ್ಷೆಯು ಮುಂಬೈನ ಬಳಕೆದಾರರು “ಕಳೆದ 12 ತಿಂಗಳಲ್ಲಿ ಕಾಂಡೋಮ್ಗಳನ್ನು ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು” ಆರ್ಡರ್ ಮಾಡಿದ್ದಾರೆ ಅಂತ ತಿಳಿಸಿದೆ.
ಮುಂಬೈ ಜನ ಮಾತ್ರ ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್ಗಳನ್ನು ಆರ್ಡರ್ ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ