ಬೆಂಗಳೂರು : ನಿನ್ನೆ ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಂದ ಎಲ್ಲ ರಸಗೊಬ್ಬರ ಅಂಗಡಿಗಳಲ್ಲಿ ನೋ ಸ್ಟಾಕ್ ಎಂದು ಬೋರ್ಡ್ ಹಾಕಲಾಗಿದೆ. ಬೆಳಿಗ್ಗೆ ಇಂದ ರಾತ್ರಿ ವರೆಗೂ ಸರತಿ ಸಾಲಲ್ಲಿ ನಿಂತರು ಗೊಬ್ಬರ ಸಿಕ್ಕಿಲ್ಲ ಇದರಿಂದ ಬೇಸತ್ತ ಕುಣಿಕೆರಿ ತಾಂಡಾ ನಿವಾಸಿ ಬಸಪ್ಪ ಬಡಿಗಿ ಮಣ್ಣು ತಿಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದೆ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಅನ್ನ ನೀಡುವ ರೈತರಿಗೆ ಮಣ್ಣು ಮುಕ್ಕಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕಾರ. ಈ ಬಾರಿ ಮುಂಗಾರು ಒಂದು ತಿಂಗಳು ಮುಂಚಿತವಾಗಿ ಬಂದಾಗಲೇ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು, ವಿತರಣೆ ಬಗ್ಗೆ ಗಮನ ಹರಿಸಬೇಕಾಗಿದ್ದ ಕಾಂಗ್ರೆಸ್ ಸರ್ಕಾರ, ಬಣ ಬಡಿದಾಟ, ಕುರ್ಚಿ ಕಿತ್ತಾಟದ ಭರಾಟೆಯಲ್ಲಿ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ರೈತರು ಮಣ್ಣು ತಿನ್ನುವ ಪರಿಸ್ಥಿತಿ ತಂದಿಟ್ಟಿದೆ. ಅನ್ನದಾತರ ಶಾಪ ಈ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು.
ಅನ್ನ ನೀಡುವ ರೈತರಿಗೆ ಮಣ್ಣು ಮುಕ್ಕಿಸಿದ @INCKarnataka ಸರ್ಕಾರಕ್ಕೆ ಧಿಕಾರ!
ಈ ಬಾರಿ ಮುಂಗಾರು ಒಂದು ತಿಂಗಳು ಮುಂಚಿತವಾಗಿ ಬಂದಾಗಲೇ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು, ವಿತರಣೆ ಬಗ್ಗೆ ಗಮನ ಹರಿಸಬೇಕಾಗಿದ್ದ ಕಾಂಗ್ರೆಸ್ ಸರ್ಕಾರ, ಬಣ ಬಡಿದಾಟ, ಕುರ್ಚಿ ಕಿತ್ತಾಟದ ಭರಾಟೆಯಲ್ಲಿ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ… pic.twitter.com/kJmktIuse0
— R. Ashoka (@RAshokaBJP) July 27, 2025