ಮಡಿಕೇರಿ: ಇಲ್ಲಿನ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 7.40ಕ್ಕೆ ನಡೆಯಲಿರುವ ಶ್ರೀಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವ ನಡೆಯಲಿದೆ. ಈ ಸಂದರ್ಭದಲ್ಲಿ ಕಲ್ಯಾಣಿ ಮತ್ತು ಪವಿತ್ರ ಬ್ರಹ್ಮಕುಂಡಿಕೆ ಬಳಿ ಪ್ಲಾಸ್ಟಿಕ್ ಬಾಟಲಿ, ಬಿಂದಿಗೆ ಮತ್ತು ಕ್ಯಾನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ʼತೀರ್ಥೋದ್ಭವವಾಯಿತುʼ ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಸಾಮಾನ್ಯವಾಗಿ ಕಲ್ಯಾಣಿಗೆ ಪ್ಲಾಸ್ಟಿಕ್ ಬಿಂದಿಗೆ, ಕ್ಯಾನ್, ಬಾಟಲಿಗಳನ್ನು ಹಿಡಿದು ಧುಮುಕುವ ಭಕ್ತರು ಬ್ರಹ್ಮಕುಂಡಿಕೆ ಬಳಿ ತೀರ್ಥವನ್ನು ಅದರಲ್ಲೇ ತುಂಬಿಸಿಕೊಳ್ಳುತ್ತಾರೆ. ಹಾಗಾಗಿ ತೀರ್ಥ ತುಂಬಿಸಿಕೊಳ್ಳಲು ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲಾಗಿದೆ.
ಮಡಿಕೇರಿಯ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 7.40ಕ್ಕೆ ನಡೆಯಲಿರುವ ಶ್ರೀಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವದಲ್ಲಿ ಕಲ್ಯಾಣಿ ಮತ್ತು ಪವಿತ್ರ ಬ್ರಹ್ಮಕುಂಡಿಕೆ ಬಳಿ ಪ್ಲಾಸ್ಟಿಕ್ ಬಾಟಲಿ, ಬಿಂದಿಗೆ ಮತ್ತು ಕ್ಯಾನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ʼತೀರ್ಥೋದ್ಭವವಾಯಿತುʼ ಎಂದು ಅರ್ಚಕರು ಘೋಷಿಸುತ್ತಿದ್ದಂತೆ… pic.twitter.com/byQChyUHB5
— DIPR Karnataka (@KarnatakaVarthe) October 15, 2024
ರಾಜ್ಯ ಸರ್ಕಾರದಿಂದ ‘ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ’ಗೆ ತೆರಳೋರಿಗೆ ಗುಡ್ ನ್ಯೂಸ್
ಬೆಂಗಳೂರು ಜನತೆ ಗಮನಕ್ಕೆ: ಮಳೆ ಅವಾಂತರ ಸಂಬಂಧಿತ ದೂರುಗಳಿಗಾಗಿ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ