ಶಿವಮೊಗ್ಗ: ಸಾಗರ ನಗರಸಭೆ ಪೌರಾಯುಕ್ತರಾಗಿದ್ದಂತ ಹೆಚ್.ಕೆ ನಾಗಪ್ಪ ಅವರು ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ಪೇಟೆ ಠಾಣೆಗೆ ಮಹದೇವಪ್ಪ.ಎಸ್ ಎಂಬುವರು ದೂರು ನೀಡಿದ್ದಾರೆ.
ಈ ಸಂಬಂಧ ದಿನಾಂಕ 05-11-2025ರಂದು ಸಾಗರ ಪೇಟೆ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ಮಹಾದೇವಪ್ಪ.ಎಸ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಹೆಚ್.ಕೆ ನಾಗಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಹಾದೇವಪ್ಪ ನೀಡಿದ ದೂರಿನಲ್ಲಿ ಏನಿದೆ?
ದಿನಾಂಕ 31-10-2025ರ ಶುಕ್ರವಾರದಂದು ರಾತ್ರಿ 9 ಗಂಟೆಯ ಸುಮಾರಿಗೆ ಸಾಗರ ಪೇಟೆಯಿಂದ ನಾನು ಮನೆಯ ಕಡೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಜನಗಳ ಗುಂಪು ಕಂಡು ನಾನು ಅಲ್ಲಿಗೆ ಹೋದ ಸಂದರ್ಭದಲ್ಲಿ ಸಾಗರ ನಗರಸಭೆಯ ಆಯುಕ್ತ ಹೆಚ್.ಕೆ ನಾಗಪ್ಪ ತಮ್ಮ ಸರ್ಕಾರಿ ವಾಹನ ಸಮೇತ ಅಲ್ಲಿಗೆ ಬಂದಿದ್ದು, ಬೀದಿ ಬದಿ ವ್ಯಾಪಾರಿಗಳ ಜೊತೆಗೆ ವಾಗ್ವಾದ ಮಾಡುತ್ತಿದ್ದರು ಎಂದಿದ್ದಾರೆ.
ಈ ಸಂದರ್ಭದಲ್ಲಿ ನಾನು ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಪಟ್ಟೆನು. ಆದರೇ ನನಗೆ ಸಾರ್ವಜನಿಕವಾಗಿ ಕೆಳ ದರ್ಜೆಯ ಅಶ್ಲೀಲ ಪದಗಳಿಂದ ಸೂ* ಮಕ್ಕಳ ಎಂದು ಹೀನಾಯವಾಗಿ ಬೈದಿದ್ದು, ನಗರಸಭೆ ಕಚೇರಿ ಒಳಗೆ ಬಂದರೇ ಕುತ್ತಿಗೆ ಹಿಡಿದು ಹೊರಗೆ ಹಾಕುತ್ತೇನೆ ನನ್ನನ್ನು ಏನೂ ಮಾಡಲಾಗುವುದಿಲ್ಲ ಎಂದರು ಎಂದು ಹೇಳಿದ್ದಾರೆ.
ಹೆಚ್.ಕೆ ನಾಗಪ್ಪ ಅವರು ಬೆದರಿಕೆ ಹಾಕಿದ್ದರಿದಂ ನನಗೆ ಮಾನಸಿಕವಾಗಿ ತುಂಬಾ ನೋವಾಗಿರುತ್ತದೆ. ಈಗಾಗಲೇ ಈ ಸುದ್ದಿಯು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದ್ದರಿಂದ ಹೆಚ್.ಕೆ ನಾಗಪ್ಪ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ದೂರು ಬಂದಿರುವುದನ್ನು ಖಚಿತಪಡಿಸಿದ ಎಎಸ್ಪಿ ಡಾ.ಬೆನಕ ಪ್ರಸಾದ್
ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಲಾಗಿದೆ ನಿಜವೇ ಎಂಬುದಾಗಿ ಮಾಧ್ಯಮದವರು ಸಾಗರ ಎಎಸ್ಪಿ ಡಾ.ಬೆನಕ ಪ್ರಸಾದ್ ಪ್ರಶ್ನಿಸಲಾಗಿತ್ತು. ಅವರು ಹೌದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆ ಬಗ್ಗೆ ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮವನ್ನು ಸಾಗರ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ವಹಿಸಲಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ‘ಹೆಚ್.ಕೆ ನಾಗಪ್ಪ’ ರಾಜೀನಾಮೆ: ಡಿಸಿಗೆ ಪತ್ರ








