ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಅವರು ಕಾರ್ಯಕ್ರಮವೊಂದರಲ್ಲಿ ಕನ್ನಡಿಗರನ್ನು ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದಂತ ಉಗ್ರರಿಗೆ ಹೋಲಿಕೆ ಮಾಡಿದ್ದರು. ಇಂತಹ ಗಾಯಕ ಸೋನು ನಿಗಮ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ಜಿಲ್ಲಾಧ್ಯಕ್ಷ ಧರ್ಮರಾಜ್.ಎ ಅವರು ಅವಲಹಳ್ಳಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿರ್ಗೊನಗರ್, ಬೆಂಗಳೂರು ಇಲ್ಲಿ ಏಪ್ರಿಲ್ 30, 2025 ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಡಿದ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆಗಳಿಗಾಗಿ ಈ ಮೂಲಕ ದೂರನ್ನು ಸಲ್ಲಿಸುತ್ತಿದ್ದೇನೆ.
ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟುಮಾಡಿದ್ದು, ಕರ್ನಾಟಕದ ವಿವಿಧ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆಯಲ್ಲದೆ ಹಿಂಸೆಗೆ ಪ್ರಚೋದನೆ ನೀಡುವಂತಿದೆ. ಈಗಾಗಲೇ ಸೋನು ನಿಗಮ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಕೋಟ್ಯಂತರ ಕನ್ನಡಿಗರು ಆಕ್ರೋಶಿತರಾಗಿದ್ದಾರೆ.
ಬಿ.ಎನ್.ಎಸ್. ಸೆಕ್ಷನ್ 351(2) (ಕ್ರಿಮಿನಲ್ ಮಾನಹಾನಿ):
ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಭಾಷಿಕ ಅಭಿವ್ಯಕ್ತಿಗಳನ್ನು ಭಯೋತ್ಪಾದನೆಗೆ ಜೋಡಿಸುವ ಮೂಲಕ ಕನ್ನಡಿಗರ ಮಾನಹಾನಿ ಮಾಡಿವೆ. ಇದರಿಂದ ಶಾಂತಿಪ್ರಿಯ ಸಮುದಾಯವಾಗಿರುವ ಕನ್ನಡಿಗರ ಖ್ಯಾತಿಗೆ ಧಕ್ಕೆಯುಂಟಾಗಿದೆ. ಈ ಹೇಳಿಕೆಗಳು ಸಾರ್ವಜನಿಕವಾಗಿ, ಕಾರ್ಯಕ್ರಮದ ವೇಳೆ ಮಾಡಲಾಗಿದ್ದು, ಕೆರಳಿಸುವ ಮತ್ತು ಅವಮಾನಿಸುವ ಉದ್ದೇಶವನ್ನು ಹೊಂದಿವೆ.
ಬಿ.ಎನ್.ಎಸ್. ಸೆಕ್ಷನ್ 351(2) ಪ್ರಕಾರ “ಯಾರೇ ಆಗಲಿ, ಯಾವುದೇ ವ್ಯಕ್ತಿಯ ಬಗ್ಗೆ ಆ ವ್ಯಕ್ತಿಯ ಖ್ಯಾತಿಗೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಅಥವಾ ಅಂತಹ ಆರೋಪವು ಖ್ಯಾತಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ತಿಳಿದುಕೊಂಡು, ಆರೋಪವನ್ನು ಮಾಡಿದರೆ ಅಥವಾ ಪ್ರಕಟಿಸಿದರೆ, ಆ ವ್ಯಕ್ತಿಯನ್ನು ಮಾನಹಾನಿಗೊಳಿಸಿದ್ದಾರೆ ಎಂದು ಹೇಳಲಾಗುವುದು.
ಬಿಎನ್ ಎಸ್ ಸೆಕ್ಷನ್ 353 (ಧಾರ್ಮಿಕ ಅಥವಾ ಭಾಷಿಕ ಭಾವನೆಗಳನ್ನು ಕೆರಳಿಸುವುದು:
ಕನ್ನಡ ಗೀತೆಯ ಕೋರಿಕೆಯನ್ನು ಗೇಲಿ ಮಾಡಿ, ಭಯೋತ್ಪಾದಕ ದಾಳಿಗೆ ಸಂಬಂಧಿಸುವ ಮೂಲಕ, ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾಷಿಕ ಭಾವನೆಗಳನ್ನು ಕೆರಳಿಸಿವೆ. ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಅಪಾರ ಹೆಮ್ಮೆಯನ್ನು ಹೊಂದಿರುತ್ತಾರೆ. ಈ ಕೃತ್ಯವು ಸಾರ್ವಜನಿಕ ಸೌಹಾರ್ದತೆಗೆ ಭಂಗ ತಂದಿದ್ದು, ಕನ್ನಡಿಗರ ಘನತೆಗೆ ಧಕ್ಕೆಯುಂಟುಮಾಡಿದೆ.
ಬಿಎನ್ ಎಸ್ ಸೆಕ್ಷನ್ 353 ಪ್ರಕಾರ “ಯಾರೇ ಆಗಲಿ, ಉದ್ದೇಶಪೂರ್ವಕವಾಗಿ ಅಥವಾ ತಿಳಿದುಕೊಂಡು, ಮಾತುಗಳಿಂದ, ಲಿಖಿತವಾಗಿ ಅಥವಾ ಗೋಚರ ಚಿತ್ರಣಗಳಿಂದ, ಭಾರತದ ಯಾವುದೇ ವರ್ಗದ ನಾಗರಿಕರ ಧಾರ್ಮಿಕ ಅಥವಾ ಇತರ ನಂಬಿಕೆಗಳನ್ನು ಅಥವಾ ಭಾವನೆಗಳನ್ನು ಅವಮಾನಿಸಿದರೆ ಅಥವಾ ಅವಮಾನಿಸಲು ಪ್ರಯತ್ನಿಸಿದರೆ, ಆ ಭಾವನೆಗಳನ್ನು ಆಕ್ಷೇಪಿಸುವ ಉದ್ದೇಶದಿಂದ, ಶಿಕ್ಷೆಗೆ ಒಳಪಡಬೇಕು.
ಮಾನ್ಯರೆ, ಸೋನು ನಿಗಮ್ ಅವರ ಹೇಳಿಕೆಗಳ ಪರಿಣಾಮವಾಗಿ, ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ. ಒಂದು ಕನ್ನಡ ಹಾಡು ಹೇಳಿ ಎಂಬ ಸಣ್ಣ ಸಾಂಸ್ಕೃತಿಕ ಕೋರಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಸಮೀಕರಿಸುವ ಮೂಲಕ, ಸೋನು ನಿಗಮ್ ಅವರು ಕನ್ನಡಿಗರನ್ನು ಅಸಹಿಷ್ಣು ಅಥವಾ ಹಿಂಸಾಪ್ರಿಯರು ಎಂದು ಚಿತ್ರಿಸಿದ್ದಾರೆ. ಕನ್ನಡಿಗರು ಸ್ವಭಾವತಃ ಶಾಂತಿಪ್ರಿಯರು.
ಕನ್ನಡಿಗರ ಸೌಹಾರ್ದತೆ ಮತ್ತು ಸಹಬಾಳ್ವೆಯ ಸ್ವಭಾವಕ್ಕೆ ವಿರುದ್ಧವಾಗಿ ಈ ಹೇಳಿಕೆ ಹೊರಬಂದಿರುತ್ತದೆ. ಸೋನು ನಿಗಮ್ ಅವರ ಹೇಳಿಕೆ ಕರ್ನಾಟಕದಲ್ಲಿ ಭಾಷಾ ಗಲಭೆಗೆ ನಾಂದಿ ಹಾಡುವಂತಿದೆ. ಕರ್ನಾಟಕ ವೈವಿಧ್ಯತೆಗೆ ಹೆಸರಾದ ರಾಜ್ಯ, ಸೋನು ನಿಗಮ್ ಅವರಂತಹ ಸಾರ್ವಜನಿಕ ವ್ಯಕ್ತಿಯಿಂದ, ವ್ಯಾಪಕ ಅನುಯಾಯಿಗಳನ್ನು ಹೊಂದಿರುವವರಿಂದ, ಇಂತಹ ಹೇಳಿಕೆಗಳು ಕನ್ನಡಿಗರ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸುವಂತಿವೆ. ಅಲ್ಲದೆ ಸಮಾಜದಲ್ಲಿ ಸಮುದಾಯಗಳ ನಡುವೆ ವಿಭಜನೆಯನ್ನು ಮೂಡಿಸುತ್ತಿದೆ. ಇದು ಸಾಮುದಾಯಿಕ ಸೌಹಾರ್ದತೆಗೆ ಅಪಾಯವನ್ನುಂಟುಮಾಡುತ್ತದೆ.
ಈ ನಿಟ್ಟಿನಲ್ಲಿ ಬಿಎನ್ ಎಸ್, 2023 ರ ಸೆಕ್ಷನ್ 352(1), 351(2), ಮತ್ತು 353 ಅಡಿಯಲ್ಲಿ ಸೋನು ನಿಗಮ್ ವಿರುದ್ಧ ಈ ದೂರು ದಾಖಲಿಸಿ, ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ, ಕ್ರಿಮಿನಲ್ ಮಾನಹಾನಿಗಾಗಿ, ಮತ್ತು ಭಾಷಿಕ ಭಾವನೆಗಳನ್ನು ಆಕ್ಷೇಪಿಸಿದ್ದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
ಈ ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಿ, ಕಾರ್ಯಕ್ರಮದ ವಿಡಿಯೋ ಸಾಕ್ಷ್ಯ ಮತ್ತು ಏಪ್ರಿಲ್ 30, 2025 ರಂದು ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಉಪಸ್ಥಿತರಿದ್ದ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಿ ಕನ್ನಡಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಮತ್ತು ಭವಿಷ್ಯದಲ್ಲಿ ಇಂತಹ ವಿಭಜನಕಾರಿ ಹೇಳಿಕೆಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ವಿನಂತಿಸುತ್ತೇನೆ.
ತನಿಖೆ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ ಮತ್ತು ಅಗತ್ಯವಿದ್ದಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇನೆ. ಈ ಗಂಭೀರ ಅಪರಾಧವನ್ನು ತಕ್ಷಣವೇ ಗಮನಿಸಿ, ನಮ್ಮ ಸಮಾಜದ ಸೌಹಾರ್ದತೆ ಮತ್ತು ಐಕ್ಯತೆಗೆ ಧಕ್ಕೆಯನ್ನುಂಟುಮಾಡುವ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ
ಘಟನೆಯ ವಿವರಗಳು:
ಏಪ್ರಿಲ್ 25,26-2025 ರಂದು, ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ, ಒಬ್ಬ ವಿದ್ಯಾರ್ಥಿಯು ಸೋನು ನಿಗಮ್ ಅವರಿಗೆ ಕನ್ನಡ ಗೀತೆಯನ್ನು ಹಾಡಲು ಕೋರಿದ್ದಾನೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸೋನು ನಿಗಮ್ ಅವರು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದು, ” ಕನ್ನಡ, ಕನ್ನಡ, ಕನ್ನಡ, ಇದೇ ಕಾರಣಕ್ಕೆ ಪಹಲ್ಯಾಮ್ನಲ್ಲಿ ಘಟನೆ ಸಂಭವಿಸಿತು” ಎಂದು ಹೇಳಿದ್ದಾರೆ.
ಕನ್ನಡ ಹಾಡು ಹೇಳಲು ಬಂದ ಒಂದು ಯಕಶ್ಚಿತ್ ಕೋರಿಕೆಗೆ ಅವರು ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಟಾಮ್ನಲ್ಲಿ ಏಪ್ರಿಲ್ 22, 2025 ರಂದು ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ್ದಾರೆ, ಪಹಲ್ಕಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ 26 ಪ್ರವಾಸಿಗರು ಮೃತಪಟ್ಟಿದ್ದರು. ಕನ್ನಡ ಗೀತೆಯ ಕೋರಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸುವ ಮೂಲಕ, ನಿಗಮ್ ಅವರು ಕನ್ನಡಿಗ ಸಮುದಾಯವನ್ನು ಅವಮಾನಿಸಿದ್ದಲ್ಲದೆ, ಅವರ ಸಾಂಸ್ಕೃತಿಕ ಹೆಮ್ಮೆಯನ್ನು ಅಥವಾ ಭಾಷಿಕ ಗುರುತನ್ನು ಹಿಂಸೆ ಮತ್ತು ಅಸಹಿಷ್ಣುತೆಗೆ ಹೋಲಿಸಿದ್ದಾರೆ.
ಈ ಹೇಳಿಕೆಗಳು ವಿಡಿಯೋ ರೂಪದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿವಿಧ ಸುದ್ದಿ ವಾಹಿನಿಗಳಲ್ಲಿ ವರದಿಯಾಗಿದೆ, ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆಯಲ್ಲದೆ, ಕನ್ನಡಿಗರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಯುವ ಆತಂಕ ಉಂಟಾಗಿದೆ.
ಸೋನು ನಿಗಮ್ ಅವರ ಹೇಳಿಕೆಗಳು ಆಕ್ಷೇಪಾರ್ಹ, ವಿಭಜನಕಾರಿ ಮತ್ತು ಸಾಮುದಾಯಿಕ ಸೌಹಾರ್ದಕ್ಕೆ ಹಾನಿಕಾರಕವಾಗಿವೆ. ಇವು ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್), 2023 ರ ಕೆಳಗಿನ ಸೆಕ್ಷನ್ ಗಳನ್ನು ಉಲ್ಲಂಘಿಸುತ್ತವೆ:
1. ಬಿಎನ್ ಎಸ್ ಸೆಕ್ಷನ್ 352(1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು): ಭಾಷೆ, ಜಾತಿ, ಅಥವಾ ಸಮುದಾಯದಂತಹ ಕಾರಣಗಳ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಮತ್ತು ಸೇಡಿನ ಭಾವನೆಗಳನ್ನು ಉತ್ತೇಜಿಸುವ ಕೃತ್ಯಗಳನ್ನು ಈ ಸೆಕ್ಷನ್ ಶಿಕ್ಷಾರ್ಹಗೊಳಿಸುತ್ತದೆ. ಕನ್ನಡ ವಿದ್ಯಾರ್ಥಿಯ ಕೋರಿಕೆಯನ್ನು ಭಯೋತ್ಪಾದಕ ದಾಳಿಗೆ ಸಂಬಂಧಿಸುವ ಮೂಲಕ, ನಿಗಮ್ ಅವರು ಕನ್ನಡಿಗ ಮತ್ತು ಇತರ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ. ಇದು ಕರ್ನಾಟಕದಂತಹ ಶಾಂತಿಪ್ರಿಯ ರಾಜ್ಯದಲ್ಲಿ ವಿಭಜನೆಯನ್ನು ಉಂಟುಮಾಡಬಹುದು.
ಬಿಎನ್ ಎಸ್ ಸೆಕ್ಷನ್ 352(1) ಪ್ರಕಾರ “ಯಾರೇ ಆಗಲಿ, ಮಾತುಗಳಿಂದ, ಲಿಖಿತವಾಗಿ ಅಥವಾ ಗೋಚರ ಚಿತ್ರಣಗಳಿಂದ, ಧರ್ಮ, ಜಾತಿ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಕುಲ ಅಥವಾ ಸಮುದಾಯದಂತಹ ಯಾವುದೇ ಕಾರಣಗಳಿಂದ, ವಿವಿಧ ಧಾರ್ಮಿಕ, ಜಾತಿಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ಅಸೌಹಾರ್ದತೆ, ದ್ವೇಷ ಅಥವಾ ಕೆಡದ ಭಾವನೆಗಳನ್ನು ಉತ್ತೇಜಿಸಿದರೆ ಅಥವಾ ಉತ್ತೇಜಿಸಲು ಪ್ರಯತ್ನಿಸಿದರೆ, ಶಿಕ್ಷೆಗೆ ಒಳಪಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ