ಶಿವಮೊಗ್ಗ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಹಸೀನ್ಗೆ ನೋಟಿಸ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಹೈಅಲರ್ಟ್: ಇಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಿಟಿ ರೌಂಡ್ಸ್
ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ್ದ ಉದ್ಯಮಿ ತಹಸೀನ್ ಪೂನಾವಾಲಾ ಅವರಿಗೆ ಇ-ಮೇಲ್ ಮೂಲಕ ನೋಟಿಸ್ ಜಾರಿಯಾಗಿದ್ದು ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಕರಣವೇನು ?
ಡಿ. 25 ರಂದು ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಭೋಪಾಲ್ನ ಬಿಜೆಪಿ ಸಂಸದೆ ಸಾದಿ ಪ್ರಜ್ಞಾ ಸಿಂಗ್ ಪ್ರಚೋದನಕಾರಿ ಭಾಷಣ ಮಾಡಿದ್ದರುಸ್ವಯಂ ರಕ್ಷಣೆಗೆ ಮನೆಯಲ್ಲಿರುವ ಹರಿತಾದ ಚಾಕು ಬಳಿಕೆ ಮಾಡಲು ಕರೆ ಕೊಟ್ಟು, ಲವ್ ಜಿಹಾದ್ ವಿರುದ್ದ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಿದ್ದರು. ಈ ರೀತಿ ಶಿವಮೊಗ್ಗದಲ್ಲಿ ಪ್ರಚೋಧನಾರಿ ಭಾಷಣ ಮಾಡಿದ ಸಂಸದೆ ವಿರುದ್ಧ ದೂರು ದಾಖಲು ಮಾಡುವಂತೆ ನವ ದೆಹಲಿ ಮೂಲದ ಉದ್ಯಮಿ ತಹಸೀನ್ ಪೂನಾವಾಲಾ ಟ್ವಿಟರ್ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ನೀಡಿದ್ದರು.