ಬೆಂಗಳೂರು : ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ ಎಂದು ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.
ಬೆಂಗಳೂರು ಕರಗ ವಿಶ್ವವಿಖ್ಯಾತಿ ಪಡೆದಿದೆ, ಆದರೆ ಇಲ್ಲಿ ಕರಗದ ಕೈಯಲ್ಲಿ ಕೆಟ್ಟದಾಗಿ ಕುಣಿಸಿ, ಸುತ್ತ ನಿಂತು ಚಪ್ಪಾಳೆ ತಟ್ಟಿ ಅವಹೇಳನ ಮಾಡಲಾಗಿದೆ ಎಂದಿದ್ದಾರೆ. ನಮ್ಮ ಸಮುದಾಯದ ಆಚರಣೆಯನ್ನು ಗಾಳಿಗೆ ತೂರಲಾಗಿದೆ. ಸಮುದಾಯಗಳ ನಂಬಿಕೆ ಧಕ್ಕೆ ತರಬಾರದು, ನಮ್ಮ ಶ್ರದ್ದೆ, ಆಚಾರ ವಿಚಾರಗಳಿಗೆ ಧಕ್ಕೆ ತಂದಿದ್ದು ಬಹಳ ನೋವಾಗಿದೆ ಎಂದರು. ಆದ್ದರಿಂದ ನಾವು ಫಿಲಂ ಚೇಂಬರ್ ಗೆ ದೂರು ನೀಡಿದ್ದೇವೆ ಎಂದರು.
ಸಿನಿಮಾದಲ್ಲಿ ಮೂರು ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕಬೇಕು, ಇಷ್ಟೇ ನಮ್ಮ ಬೇಡಿಕೆ, ಸಿನಿಮಾದ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ಸಿನಿಮಾದಲ್ಲಿ ಬಳಕೆ ಮಾಡಿರುವ ದೃಶ್ಯಗಳು, ಏಕವಚನ ಪದಗಳ ಬಗ್ಗೆ ಅಸಾಮಾಧಾನವಿದೆ ಎಂದಿದ್ದಾರೆ.
ಸ್ಯಾಂಡಲ್ ವುಡ್ ಹಡ್ ಬುಷ್ ಸಿನಿಮಾ ರಿಲೀಸ್ ಆಗಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೇ ಹೆಡ್ ಬುಷ್ ಸಿನಿಮಾ ವಿವಾದಕ್ಕೆ ಗುರಿಯಾಗಿದೆ. ಈ ಸಿನಿಮಾದ ಫೈಟ್ ಸೀನ್ ಕುರಿತು ವಿವಾದ ಶುರುವಾಗಿದೆ. ಈ ಸಿನಿಮಾದಲ್ಲಿ ವೀರಗಾಸೆ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ನಟ ಡಾಲಿ ಧನಂಜಯ್ ವಿರುದ್ಧ ನೆಟ್ಟಿಗರು ಕೆಂಡಾಮಂಡಲ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಫೈಟಿಂಗ್ ಸೀನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವೀರಗಾಸೆ ಮಾಡಿದ್ದವರನ್ನು ಶೂ ಕಾಲಿನಲ್ಲಿ ಹೊಡೆಯುತ್ತಾರೆ. ಜೊತೆಗೆ ವೀರಗಾಸೆ ಬಟ್ಟೆ ತೊಟ್ಟು ಫೈಟ್ ಸೀನ್ ಮಾಡಲಾಗಿದೆ. ಫೈಟ್ ಸೀನ್ ನಲ್ಲಿ ವೀರಗಾಸೆ ವೇಷಧಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾಲಿ ಧನಂಜಯ್ ಹೇಳಿದ್ದೇನು..?
ಈ ಕುರಿತು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದು, ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ.
ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ.. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ ಧನಂಜಯ್. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.